ಚೂರಿಕಟ್ಟೆ. ಹೆಸರಷ್ಟೇ ಅಲ್ಲ, ಚಿತ್ರದ ಕಥೆಯೂ ವಿಶೇಷವಾಗಿಯೇ ಇದೆ. ರಾಘು ಶಿವಮೊಗ್ಗ ನಿರ್ದೇಶನದ ಈ ಸಿನಿಮಾದಲ್ಲಿರೋದು ಬ್ರಿಟಿಷರ ಕಾಲದ ಕಥೆ. ಚಿತ್ರದಲ್ಲಿರುವುದು ಟಿಂಬರ್ ಮಾಫಿಯಾದ ಸ್ಟೋರಿ. ಅದು ಹೊರಜಗತ್ತಿಗೆ ಗೊತ್ತಿಲ್ಲದ ಸತ್ಯಘಟನೆಯನ್ನಾಧರಿಸಿದ ಕಥೆಯಂತೆ. ಕಾನ್‍ಸ್ಟೇಬಲ್ ಒಬ್ಬ ಟಿಂಬರ್ ಮಾಫಿಯಾ ಜಾಲದಲ್ಲಿ ಸಿಕ್ಕಿಕೊಳ್ಳುವ ಕಥೆ, ಈಗಿನ ಕಾಲಘಟ್ಟಕ್ಕೂ ಬರುತ್ತೆ. ಹೇಗೆ ಅನ್ನೋ ಕುತೂಹಲಕ್ಕೆ ಸಿನಿಮಾದಲ್ಲಿಯೇ ಉತ್ತರ ಸಿಗಬಲಿದೆ.
ಸತ್ಯ ಘಟನೆಯನ್ನು ಆಧರಿಸಿ, ಅದಕ್ಕೆ ಒಂದಷ್ಟು ಸಿನಿಮೀಯ ಅಂಶಗಳನ್ನು ಸೇರಿಸಿ ಕಥೆ, ಚಿತ್ರಕಥೆ ರಚಿಸಲಾಗಿದೆ ಅನ್ನೋದು ರಘು ಶಿವರಾಮ್ ವಿವರಣೆ. ಈ ರಘು ಶಿವರಾಮ್ ಅವರಿಗೆ ಸಿನಿಮಾ ಹೊಸದಾದರೂ ನಿರ್ದೇಶನ ಹೊಸದಲ್ಲ. ಈ ಹಿಂದೆ ಚೌಕಾಬಾರ ಎಂಬ ಕಿರುಚಿತ್ರದ ಮೂಲಕ ಸುದ್ದಿ, ಸದ್ದು ಮಾಡಿದ್ದ ರಘು ಶಿವರಾಮ್, ಪ್ರಶಸ್ತಿಯನ್ನೂ ಪಡೆದಿದ್ದರು. ವಿಮರ್ಶಕರ ಮೆಚ್ಚುಗೆಯನ್ನೂ ಗಳಿಸಿದ್ದರು. ಈಗ ಅವರ ಚೂರಿಕಟ್ಟೆ ರಿಲೀಸ್‍ಗೆ ರೆಡಿಯಾಗಿದೆ.