ಕಾವ್ಯಾಶೆಟ್ಟಿ. ಇಷ್ಟಕಾಮ್ಯ, ಸ್ಮೈಲ್ ಪ್ಲೀಸ್, ಸಿಲಿಕಾನ್ ಸಿಟಿ ಚಿತ್ರಗಳಲ್ಲಿ ನಟಿಸಿದ್ದ ಸುಂದರಿ. ಇಗ ಅವರ ಎರಡು ಚಿತ್ರಗಳು ರಿಲೀಸ್‍ಗೆ ರೆಡಿಯಾಗಿವೆ. ಎರಡೂ ಚಿತ್ರಗಳಲ್ಲಿ ಕಾವ್ಯಾಶೆಟ್ಟಿ ಅವರದ್ದು ಪತ್ರಕರ್ತೆಯ ಪಾತ್ರ ಎನ್ನುವುದು ವಿಶೇಷ.
ಜನವರಿ 19ಕ್ಕೆ 3 ಗಂಟೆ, 30 ದಿನ, 30 ಸೆಕೆಂಡ್ ರಿಲೀಸ್ ಆಗುತ್ತಿದೆ. ಆ ಚಿತ್ರದಲ್ಲಿ ಕಾವ್ಯಾಶೆಟ್ಟಿಯವರದ್ದು ಟಿವಿ ಚಾನಲ್ ಮಾಲಕಿಯ ಪಾತ್ರ. 30 ಸೆಕೆಂಡ್ ಚಿತ್ರದ ನಿರ್ದೇಶಕ ಮಧುಸೂದನ್ ಅವರಿಗೆ ಸಿನಿಮಾ ಹೊಸದೇ ಹೊರತು, ನಿರ್ದೇಶನ ಹೊಸದಲ್ಲ. ಹೀಗಾಗಿ ಪ್ರತಿಯೊಂದನ್ನೂ ಪ್ಲಾನ್ ಮಾಡಿಕೊಂಡೇ ಮಾಡಿದ್ದರು ಎಂದು ಅನುಭವ ಹಂಚಿಕೊಂಡಿದ್ದಾರೆ ನಟಿ ಕಾವ್ಯಾಶೆಟ್ಟಿ.
ಆ್ಯಂಕರ್ ಆಗಿದ್ದರೂ, ಸಿನಿಮಾದಲ್ಲಿ ಕಾವ್ಯಾ ಶೆಟ್ಟಿ ತುಂಬಾ ಹೊತ್ತು ಪತ್ರಕರ್ತೆಯಾಗಿಯೇ ಇರೋದಿಲ್ಲ. ಪ್ರೀತಿ, ಪ್ರೇಮದಲ್ಲಿ ಮುಳುಗ್ತಾರೆ. ಚಾಲೆಂಜ್‍ಗಳನ್ನು ಹಾಕುತ್ತಾ, ಗೆಲ್ಲುತ್ತಾ, ಸೋಲುತ್ತಾ ಹೋಗುವ ವಿಭಿನ್ನ ಪಾತ್ರ ಅದು. ಸಿನಿಮಾ ಅಂತೂ ಬಿಡುಗಡೆಗೆ ಮೊದಲೇ ವಿಚಿತ್ರ ಕುತೂಹಲ ಸೃಷ್ಟಿಸಿದೆ. ಉತ್ತರ ಸಿಗೋದು ಮುಂದಿನ ವಾರ.