ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್. ಡ್ಯಾನಿಶ್ ಸೇಟ್ ಅಭಿನಯದ ಈ ಸಿನಿಮಾ ರಾಜಕೀಯ ವಿಡಂಬನೆಯ ಚಿತ್ರ. ಸಾದ್ ನಿರ್ದೇಶನದ ಈ ಸಿನಿಮಾದಲ್ಲಿ ರಾಜಕಾರಣಿಗಳನ್ನು ಲೇವಡಿ ಮಾಡಲಾಗಿದೆ. ಗಿಮಿಕ್ಕುಗಳನ್ನು, ಗಿಮಿಕ್ಕುಗಳ ಹಿಂದಿನ ರಸಗವಳದಂತಾ ಕಥೆಯನ್ನು ತೋರಿಸಲಾಗಿದೆ. ಹಾಗಾದರೆ ಸಿನಿಮಾವನ್ನು ಏಕೆ ನೋಡಬೇಕು..? ಹಲವು ವಿಶೇಷಗಳ ಜೊತೆ ಇನ್ನೂ ಒಂದು ಕಾರಣ ಇದೆ. ಈ ಸಿನಿಮಾ ನೋಡಿದರೆ ಎಂಥವರಿಗೆ ವೋಟ್ ಹಾಕಬಾರದು ಎನ್ನುವುದು ಗೊತ್ತಾಗಲಿದೆ.
ಸಿನಿಮಾ ಆರಂಭವಾಗಿ ಮುಗಿಯುವವರೆಗೆ ಜನ ಬಿದ್ದು ಬಿದ್ದೂ ನಗ್ತಾರೆ. ಒಂದು ಒಳ್ಳೆಯ ಮೆಸೇಜ್ ಇರುವ ಸಿನಿಮಾ. ಸಿನಿಮಾ ನೋಡಿದರೆ, ಎಂಥವರಿಗೆ ವೋಟ್ ಹಾಕಬಾರದು ಎಂಬುದಂತೂ ಗೊತ್ತಾಗುತ್ತೆ. ಎಲೆಕ್ಷನ್ ಬೇರೆ ಹತ್ತಿರ ಬರ್ತಾ ಇದೆ. ಈ ಸಮಯಕ್ಕೆ ಇಂಥಾದ್ದೊಂದು ಸಿನಿಮಾ ಬೇಕಿತ್ತು ಅಂತಾರೆ ಡ್ಯಾನಿಶ್ ಸೇಟ್.
ಪ್ರತಿದಿನ ಸಿನಿಮಾದ ಪುಟ್ಟ ಪುಟ್ಟ ವಿಡಿಯೋಗಳನ್ನು ಅಪ್‍ಲೋಡ್ ಮಾಡುತ್ತಲೇ ಇರುವ ಡ್ಯಾನಿಶ್ ಸೇಟ್, ಅದರಿಂದ ಚಿತ್ರಕ್ಕೆ ಪ್ರಚಾರವಾಗುತ್ತದೆಯೇ ಹೊರತು ಸಮಸ್ಯೆ ಆಗೋದಿಲ್ಲ. ನಮ್ಮ ಸಿನಿಮಾದ ಮೇಲೆ ನಮಗೆ ನಂಬಿಕೆ ಇದೆ ಎಂದು ಆತ್ಮವಿಶ್ವಾಸದಿಂದ ಹೇಳ್ತಾರೆ. ಚಿತ್ರದ ಬಿಡುಗಡೆ ಜೊತೆ ಜೊತೆಯಲ್ಲೇ 17 ಪ್ರೀಮಿಯರ್ ಶೋಗಳನ್ನು ಏರ್ಪಡಿಸಲಾಗಿದೆ. ಪ್ರೀಮಿಯರ್ ಶೋಗಳು ಆಗಲೇ ಹೌಸ್‍ಫುಲ್.
ಆನ್‍ಲೈನ್ ಮತ್ತು ಪ್ರೀಮಿಯರ್ ಶೋ ರೆಸ್ಪಾನ್ಸ್ ನೋಡುತ್ತಿದ್ದರೆ, ಜನವರಿ 12ರಂದು ಥಿಯೇಟರ್‍ಗಳು ತುಂಬಿ ತುಳುಕೋದ್ರಲ್ಲಿ ನೋ ಡೌಟ್.