ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ಸಿನಿಮಾ ನೋಡಿದವರಿಗೆ ಡ್ಯಾನಿಶ್ ಸೇಟ್ ಅವರಷ್ಟೇ ಗಮನ ಸೆಳೀತಿರೋದು ಅವರ ಪತ್ನಿಯ ಪಾತ್ರಧಾರಿ ಲಾವಣ್ಯ. ಲಾವಣ್ಯ ಆಗಿ ನಟಿಸಿರುವ ಸುಮುಖ ಸುರೇಶ್ ಅವರಿಗೆ ಡ್ಯಾನಿಶ್ ಸೇಟ್ ಮತ್ತು ನಿರ್ದೇಶಕ ಸಾದ್ ಖಾನ್ ಅವರ ಒಡನಾಟ ಹೊಸದಲ್ಲ. ಸಿನಿಮಾ ಅಷ್ಟೇ ಹೊಸದು. ಇಂಪ್ರಾಬ್ ಕಾಮಿಡಿಗಳ ಮೂಲಕ ಗಮನ ಸೆಳೆದಿದ್ದ ಸುಮುಖ ಸುರೇಶ್, ಈ ಚಿತ್ರದಲ್ಲಿ ಹೀರೋಯಿನ್.
ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ಎಷ್ಟು ಜಾಲಿ ಜಾಲಿ ಮನುಷ್ಯನೋ.. ಅಷ್ಟೇ ಫನ್ನಿ ಹೆಂಡತಿ ಅವನ ಹೆಂಡತಿ ಲಾವಣ್ಯ. ಇಬ್ಬರು ಕ್ರೇಜಿ ಪಾತ್ರಧಾರಿಗಳ ಸುತ್ತ ಹೆಣೆದಿರುವ ಕಥೆ, ಚಿತ್ರದುದ್ದಕ್ಕೂ ಕಚಗುಳಿ ಇಡುತ್ತಲೇ ಹೋಗುತ್ತೆ. ನಗಿಸಿ ನಗಿಸಿಯೇ ಸುಸ್ತು ಮಾಡಿಸುತ್ತೆ ಎನ್ನುವುದು ಲಾವಣ್ಯ ಅಲಿಯಾಸ್ ಸುಮುಖ ಸುರೇಶ್ ಅವರದ್ದು. ಇದೇ ಶುಕ್ರವಾರದಿಂದ ಥಿಯೇಟರುಗಳಲ್ಲಿ ನಗೆಯ ದಂಗೆ ಶುರುವಾಗಲಿದೆ.