ಕಿಚ್ಚ ಸುದೀಪ್‍ಗೆ ನೆಗೆಟಿವ್ ಪಾತ್ರಗಳು ಹೊಸದಲ್ಲ. ತೆಲುಗು, ತಮಿಳಿನಲ್ಲಿ ಈಗಾಗಲೇ ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಿಂಚಿಯೂ ಇದ್ದಾರೆ. ಆದರೆ, ಕನ್ನಡದಲ್ಲಿ ನೆಗೆಟಿವ್ ಪಾತ್ರಗಳನ್ನು ಮಾಡಿದವರಲ್ಲ. ಹಾಗೆಂದು ಸುದೀಪ್ ಇಮೇಜ್‍ಗೆ ಅಂಟಿಕೊಂಡು ಕುಳಿತವರೇನೂ ಅಲ್ಲ. ಆ ಇಮೇಜ್‍ನ್ನು ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ಮುರಿದಿದ್ದಾರೆ ಎನ್ನುವ ಸುದ್ದಿ ಇದೆ.
ರಾಜು ಕನ್ನಡ ಮೀಡಿಯಂನಲ್ಲಿ ಸುದೀಪ್ ಗೆಸ್ಟ್‍ರೋಲ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಅಗರ್ಭ ಶ್ರೀಮಂತನ ಪಾತ್ರ. ಮೂಲಗಳ ಪ್ರಕಾರ ಅದು ನೆಗೆಟಿವ್ ರೋಲ್. ಆದರೆ, ಚಿತ್ರತಂಡ ಈ ಗುಟ್ಟನ್ನು ಮಾತ್ರ ಬಿಟ್ಟುಕೊಡೋದಿಲ್ಲ. ಇನ್ನೊಂದು ಮೂಲಗಳ ಪ್ರಕಾರ, ಸುದೀಪ್ ಅವರದ್ದು ಸ್ಫೂರ್ತಿ ತುಂಬುವ ರೋಲ್ ಮಾಡೆಲ್ ಪಾತ್ರ. ಹೌದಾ ಎಂದರೆ, ಅದಕ್ಕೂ ಚಿತ್ರ ತಂಡ ಮಾತನಾಡೋದಿಲ್ಲ.
ಎಲ್ಲದಕ್ಕೂ ಉತ್ತರ ಸಿಗೋದು ಜನವರಿ 19ರಂದು. ಆ ದಿನ ಸಿನಿಮಾ ಥಿಯೇಟರ್‍ಗೆ ಲಗ್ಗೆಯಿಡುತ್ತಿದೆ.