ರಾಜ್ಯಾದ್ಯಂತ.. ದೇಶಾದ್ಯಂತ.. ಜಗತ್ತಿನಾದ್ಯಂತ.. ಭರ್ಜರಿ ಸುದ್ದಿ ಮಾಡುತ್ತಿರುವ ಹಂಬಲ್ ಪೊಲಿಟಿಷಿಯನ್ ಚಿತ್ರಕ್ಕೆ ಸ್ವತಃ ಪುನೀತ್ ರಾಜ್‍ಕುಮಾರ್ ಅವರಿಂದಲೂ ಮೆಚ್ಚುಗೆ ಸಿಕ್ಕಿದೆ. ಎಲ್ಲರಿಗಿಂತ ಮೊದಲು ತಮ್ಮ ಮನೆಯಲ್ಲೇ ಸಿನಿಮಾ ನೋಡಿದ ಪುನೀತ್ ರಾಜ್‍ಕುಮಾರ್ ಸಿನಿಮಾ ಸಖತ್ತಾಗಿದೆ ಎಂದಿದ್ದಾರೆ. ಡ್ಯಾನಿಶ್ ಸೇಟ್ ಅಭಿನಯಕ್ಕೆ ಹೊಟ್ಟೆ ತುಂಬಾ ನಕ್ಕಿದ್ದಾರೆ.
ನಟ ಡ್ಯಾನಿಶ್ ಸೇಟ್, ರಕ್ಷಿತ್ ಶೆಟ್ಟಿ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ದೇಶಕ ಹೇಮಂತ್ ರಾವ್ ಮತ್ತು ಪುನೀತ್ ರಾಜ್‍ಕುಮಾರ್ ಒಟ್ಟಿಗೇ ತೆಗೆಸಿಕೊಂಡ ಫೋಟೋವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಎಫ್‍ಬಿ ಖಾತೆಯಲ್ಲಿ ಹಾಕುವವರೆಗೆ ಇದು ಗುಟ್ಟಾಗಿಯೇ ಇತ್ತು.
ಯಾಕೆ ಅಂದ್ರೆ, ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ತರಲೆ, ತಮಾಷೆ ಗುಟ್ಟಾಗಿ ನಡೆಯೋದೇ ಇಲ್ಲ. ಚಿತ್ರತಂಡದ ಸದಸ್ಯ ವಿಜಯ್ ಚೆಂಡೂರ್ ಜೊತೆ ಥೇಟು ರಶ್ಮಿಕಾ-ರಕ್ಷಿತ್ ಸ್ಟೈಲಲ್ಲಿ ಬೆಳಗೆದ್ದು ಹಾಡಿನ ಗೆಟಪ್‍ನಲ್ಲಿ ಟೂರ್‍ನ್ನೇ ಹೊಡೆದಿರುವವರು. ಇಷ್ಟಕ್ಕೂ ರಾಜಕಾರಣಿಗಳು ತೀರಾ ತೀರಾ ಪರ್ಸನಲ್ ಕೆಲಸಗಳನ್ನಷ್ಟೇ ಗುಟ್ಟಾಗಿ ಮಾಡ್ತಾರೆ.
ಎಷ್ಟೆಂದರೂ ಹಂಬಲ್ ಪೊಲಿಟಿಷಿಯನ್ ಅಲ್ವಾ..? ನೋಡೋಣ. ನಾಯಕ ಗುಟ್ಟು ಮಾಡ್ತಾನಾ..? ಎಲ್ಲವನ್ನೂ ಓಪನ್ ಆಗಿಯೇ ಹೇಳ್ತಾನಾ..? ಒಳ್ಳೆಯವನಾ..? ಅಥವಾ ತುಂಬಾ ಒಳ್ಳೆಯವನಾ ಅನ್ನೋದು ಜನವರಿ 12ರಂದು ಗೊತ್ತಾಗುತ್ತೆ. ಎಳ್ಳುಬೆಲ್ಲ ತಿಂದ್ಕೊಂಡ್ ತಿಳ್ಕೊಂಡ್ರಾಯ್ತು.