` ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಸದ್ಯಕ್ಕೆ ಬೇಡ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
national anthem is not mandatory
National Anthem Played In Theater

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ವಿಚಾರ ಕುರಿತಂತೆ ಕಳೆದ ವರ್ಷ ಭಾರೀ ಚರ್ಚೆಯೇ ನಡೆದಿತ್ತು. ಸುಪ್ರೀಂಕೋರ್ಟ್‍ನ ತೀರ್ಪು ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿಬಿಟ್ಟಿತ್ತು. ಆರಂಭದಲ್ಲಿ ರಾಷ್ಟ್ರಗೀತೆ ಕಡ್ಡಾಯ ಮಾಡಿದ ನ್ಯಾಯಾಲಯ, ಹಂತ ಹಂತವಾಗಿ ಕೆಲವು ನಿರ್ಬಂಧಗಳನ್ನು ತೆಗೆದು ವಿನಾಯಿತಿ ನೀಡಿತ್ತು. ಇದರ ಮಧ್ಯೆಯೇ ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಬೇಕೇ ಎಂಬ ಬಗ್ಗೆ ಕೇಂದ್ರ ಸರ್ಕಾರದಿಂದ ವರದಿಯನ್ನೂ ಕೇಳಿತ್ತು.

ಕೆಲವೇ ತಿಂಗಳ ಹಿಂದೆ ರಾಷ್ಟ್ರಗೀತೆ ಕಡ್ಡಾಯ ಮಾಡುವ ಪರ ವಾದ ಮಂಡಿಸಿದ್ದ ಕೇಂದ್ರ ಸರ್ಕಾರ, ಈಗ ತಿದ್ದುಪಡಿಯ ಉತ್ತರ ನೀಡಿದೆ. ರಾಷ್ಟ್ರಗೀತೆಯನ್ನು ಚಿತ್ರಮಂದಿರಗಳಲ್ಲಿ ಕಡ್ಡಾಯ ಮಾಡುವ ಅಗತ್ಯ ಇಲ್ಲ ಎಂದು ಹೇಳಿದೆ.

ರಾಷ್ಟ್ರಗೀತೆ ಕಡ್ಡಾಯ ವಿಚಾರ ದೇಶಪ್ರೇಮದ ಹೆಸರಲ್ಲಿ ಅನೈತಿಕ ಪೊಲೀಸ್‍ಗಿರಿಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆಗಳಿವೆ. ಹಾಗೆಂದು ಸಂಪೂರ್ಣ ವಿನಾಯಿತಿ ಎಂದೂ ಇಲ್ಲ.  ಈ ಕುರಿತು ನಿಯಮಾವಳಿ ರೂಪಿಸಲು ಸಮಿತಿ ರಚನೆ ಮಾಡಲಾಗಿದೆ. ಆ ಸಮಿತಿ 6 ತಿಂಗಳಲ್ಲಿ ವರದಿ ನೀಡಲಿದೆ. ಆ ಸಮಿತಿಯ ವರದಿ ಬರುವವರೆಗೆ ಕಡ್ಡಾಯ ಬೇಡ ಎನ್ನುವುದು ಕೇಂದ್ರ ಸರ್ಕಾರದ ಮನವಿ. ಸುಪ್ರೀಂ ಕೋರ್ಟ್ ನಿರ್ಣಯ ಇನ್ನೂ ಹೊರಬಿದ್ದಿಲ್ಲ.

Babru Teaser Launch Gallery

Odeya Audio Launch Gallery