ಕೆಜಿಎಫ್. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಬಹುನಿರೀಕ್ಷಿತ ಚಿತ್ರ ಪಂಚಭಾಷೆಯಲ್ಲೂ ಸಿದ್ಧವಾಗುತ್ತಿದೆ. ಶೂಟಿಂಗ್‍ನ ಯಾವುದೇ ಗುಟ್ಟುಗಳನ್ನೂ ಬಿಟ್ಟುಕೊಡದೆ ವರ್ಷವಿಡೀ ಸುದ್ದಿಯಲ್ಲಿದ್ದ ಸಿನಿಮಾ ಕೆಜಿಎಫ್. ಯಶ್ ಅವರ ಹುಟ್ಟುಹಬ್ಬಕ್ಕೆ ಟೀಸರ್‍ನ ಉಡುಗೊರೆ ನೀಡಿದೆ. ಅದು 17 ಸಾವಿರ ವರ್ಷಗಳ ಯುದ್ಧದ ಇತಿಹಾಸ.
ಯಶ್ ಕೆಜಿಎಫ್‍ನ ಈ ಟೀಸರ್ ಬಗ್ಗೆ ಹೆಮ್ಮೆ ಪಡಲು ಇನ್ನೂ ಒಂದು ಕಾರಣವಿದೆ. ಯಶ್ ಅವರ ಪಾತ್ರವನ್ನು ಪರಿಚಯ ಮಾಡಿಸುವುದು ಅನಂತ್‍ನಾಗ್. ಟೀಸರ್ 17 ಸಾವಿರ ವರ್ಷಗಳ ಯುದ್ಧದ ಇತಿಹಾಸ ಎಂಬ ವಾಕ್ಯದೊಂದಿಗೇ ಶುರುವಾಗುತ್ತೆ. ಹಾಗಾದರೆ ಇದು ಇತಿಹಾಸದ ಕಥೆಯಾ..? ಇತಿಹಾಸದ ಕಥೆಯಾದರೆ ಕಾಸ್ಟ್ಯೂಮ್ ಹೇಗೆ ಅಪ್‍ಡೇಟ್ ಆಗಿದೆ. ಹಾಗಾದರೆ ಇದು ಪುನರ್ಜನ್ಮದ ಕಥೆಯಾ..? ಅಥವಾ ಎರಡನ್ನೂ ಬ್ಲೆಂಡ್ ಮಾಡಿರುವ ವಿಭಿನ್ನ ಪ್ರಯತ್ನವಾ..? ಸದ್ಯಕ್ಕೆ ಯಾವುದಕ್ಕೂ ಉತ್ತರ ಇಲ್ಲ.
ಅಂದಹಾಗೆ ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.