Print 
humble politician, danish sait,

User Rating: 0 / 5

Star inactiveStar inactiveStar inactiveStar inactiveStar inactive
 
humble politicain nograj
Humble Politician Nograj Image

ನಮಸ್ಕಾರ್ ಡಿಯರ್ ಫ್ರೆಂಡ್ಸ್. ನನ್ನೆಸ್ರು ನೊಗ್‍ರಾಜ್ ಅಂತಾ.  ಐ ಆ್ಯಮ್ ಯುವರ್ ಹಂಬಲ್ ಹಂಬಲ್ ಹಂಬಲ್ ಪೊಲಿಟಿಷಿಯನ್. ನಾಟಕೀಯವಾಗಿ ಕೈ ಮುಗಿಯುತ್ತಾ ಕಾಣಿಸಿಕೊಳ್ಳುವ ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್, ನಮ್ಮ ರಾಜಕಾರಣಿಗಳ ಹಾಗಲ್ಲ. ಈ ಟ್ರೇಲರ್‍ನಲ್ಲಿ ನೋಡಿದವರಿಗೆ ನೊಗ್‍ರಾಜ್‍ನ ನಾಟಕೀಯತೆ, ಕಪಟತನ ಎಲ್ಲವೂ ಕಂಡುಬಿಡುತ್ತೆ.

ಇದು ಒಂದು ಸಕ್ಸಸ್‍ಫುಲ್ ಎಂಟರ್‍ಟೈನ್‍ಮೆಂಟ್ ಶೋ ಆಗ್ಬೇಕು ಎನ್ನುವ ಡೈಲಾಗ್ ಮೂಲಕ, ಸಿನಿಮಾ ಸಕ್ಸಸ್ ಆಗಲಿ ಎಂಬ ನಿರೀಕ್ಷೆಯೂ ಇದೆ. ಎಡಬಿಡಂಗಿ ಇಂಗ್ಲಿಷ್‍ನ್ನು ಕನ್ನಡದ ಜೊತೆ ಮಿಕ್ಸ್ ಮಾಡಿ ಮಾತನಾಡುವ ನೊಗ್‍ರಾಜ್, ವಟವಟ ಅಂತಾನೇ ಇರ್ತಾನೆ. ಇಡೀ ಚಿತ್ರದಲ್ಲಿ ಅವನದ್ದು ಪಕ್ಕಾ ರಾಜಕಾರಣಿಗಳಂತೆ ನಾಟಕಗಳ ಸರಮಾಲೆ.

ನೊಗ್‍ರಾಜ್ ಜೊತೆ ಶೃತಿ ಹರಿಹರನ್ ಎಂಬ ಚೆಲುವೆಯ ನಗುವೂ ಇದೆ. ಬಹಿರಂಗ ಪ್ರಚಾರ ಭಾರಿ ಜೋರಾಗಿ ಸಾಗುತ್ತಿದೆ. ಮನೆ ಮನೆ ಪ್ರಚಾರವೂ ನಡೆಯುತ್ತಿದೆ. ಥಿಯೇಟರುಗಳಲ್ಲಿ ಜನವರಿ 12ರಂದು ನಡೆಯಲಿರುವ ಬಿಡುಗಡೆಯ ಚುನಾವಣೆ ದಿನ, ಪ್ರೇಕ್ಷಕ ಮತದಾರರು ಎಷ್ಟು ಮತ ಹಾಕುತ್ತಾರೆ. ನೋಡೋಣ.