` ಕನ್ನಡಕ್ಕಾಗಿ ಕೈ ಎತ್ತಿದ ದರ್ಶನ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan raised his voice for kannada
Darshan Image

ಕನ್ನಡಕ್ಕಾಗಿ ಕೈ ಎತ್ತು.. ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಕನ್ನಡಕ್ಕಾಗಿ ಕೊರಳೆತ್ತು.. ನಿನ್ನ ಕೊರಳು ಪಾಂಚಜನ್ಯವಾಗುತ್ತದೆ. ಅಂಥಾದ್ದೊಂದು ಮಾತು ಹೇಳಿದ್ದವರು ಕುವಂಪು. ಅದನ್ನು ಅಕ್ಷರಶಃ ಪಾಲಿಸಿ ಗೆದ್ದಿದ್ದಾರೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್. 

ಕುರುಕ್ಷೇತ್ರ ಚಿತ್ರಕ್ಕಾಗಿ ಹೈದರಾಬಾದ್‍ನ ರಾಮೋಜಿ ಫಿಲಂ ಸಿಟಿಯಲ್ಲಿ ಶೂಟಿಂಗ್‍ನಲ್ಲಿರುವ ದರ್ಶನ್, ಅಲ್ಲಿಯೇ ಸ್ಟಾರ್ ಹೋಟೆಲ್‍ವೊಂದರಲ್ಲಿದ್ದಾರೆ. ಸ್ಟಾರ್ ಹೋಟೆಲ್ ಆದರೂ ಅಲ್ಲಿ ಕನ್ನಡವೇ ಇರಲಿಲ್ಲ. ತೆಲುಗು, ತಮಿಳು, ಮಲಯಾಳಂ, ಹಿಂದಿ ಚಾನೆಲ್‍ಗಳಿದ್ದವು. ದರ್ಶನ್ ಸೌಜನ್ಯದಿಂದಲೇ ಕೇಳಿದರು. ಸರಿಯಾದ ಉತ್ತರ ಬರಲಿಲ್ಲ.

ಕೊನೆಗೆ ಗಲಾಟೆಗೂ ಇಳಿದುಬಿಟ್ಟರು. ಹೋಟೆಲ್ ಸಿಬ್ಬಂದಿಯನ್ನು ಚೆನ್ನಾಗಿ ಝಾಡಿಸಿದ ಮೇಲೆ ಟಿವಿಯಲ್ಲಿ  ಕನ್ನಡ ಚಾನೆಲ್ ಪ್ರತ್ಯಕ್ಷವಾಯ್ತು. ಇದು ಸ್ವತಃ ದರ್ಶನ್ ಅನುಭವ. ಕೇಳದೇ ಹೋದರೆ, ಕನ್ನಡವನ್ನು ಬೇರೆಯವರು ಯಾಕಾದರೂ ಮಾತನಾಡ್ತಾರೆ ಅಲ್ವಾ..? ಇದರ ಸಂದೇಶ ಇಷ್ಟೆ.. ಕನ್ನಡಕ್ಕಾಗಿ ಕೈ ಎತ್ತಿ.. ನಿಮ್ಮ ಕೈ ಕಲ್ಪವೃಕ್ಷವಾಗುತ್ತದೆ. ಕನ್ನಡಕ್ಕಾಗಿ ಕೊರಳೆತ್ತಿ.. ನಿಮ್ಮ ಕೊರಳು ಪಾಂಚಜನ್ಯವಾಗುತ್ತದೆ.

Shivarjun Movie Gallery

KFCC 75Years Celebrations and Logo Launch Gallery