ಅವನು ಲಾಯರ್.. ಯಂಡಮೂರಿ ವೀರೇಂದ್ರನಾಥ್ ಅವರ ಕಾದಂಬರಿಯೊಂದರಲ್ಲಿನ ಪಾತ್ರದಂತೆ ಎಂಕೆಲಾ. ಅಂದರೆ, ಮರದ ಕೆಳಗಿನ ಲಾಯರು. ಇವಳು ನ್ಯೂಸ್ ಆ್ಯಂಕರ್.. ಹಾಗಂತ ಇಬ್ಬರ ಮಧ್ಯೆ ಪ್ರೀತಿಯಾಗುತ್ತಾ..? ಇಲ್ಲ. ಬದಲಿಗೆ ಜಗಳವಾಗುತ್ತೆ.
ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದನ್ನೇ ಕೆಲಸ ಮಾಡಿಕೊಂಡಿರುವ ವಕೀಲ, ಕೇಸ್ ಗೆಲ್ಲೋಕೆ ಬುದ್ದಿಮತ್ತೆ, ಚಾಕಚಕ್ಯತೆಯ ತಂತ್ರ ರೂಪಿಸೋ ತಂತ್ರಗಾರ. ಅವನಿಗೆ ಸವಾಲು ಹಾಕುವ ನಾಯಕಿ, ಕಿರಿಯಳಾದರೂ ಪ್ರಬುದ್ಧೆ. ಶಿಸ್ತು, ಗಾಂಭೀರ್ಯಕ್ಕೆ ಇನ್ನೊಂದು ಹೆಸರು.
ಅವರಿಬ್ಬರ ಮಧ್ಯೆ ಒಂದು ಚಾಲೆಂಜ್ ಬೀಳುತ್ತೆ. ಗೆಲ್ಲಲೇಬೇಕು ಎಂದು ಇಬ್ಬರೂ ಹೊರಡುತ್ತಾರೆ. ಆ ಚಾಲೆಂಜ್ ಗೆಲ್ಲುವ ಹಾದಿಯಲ್ಲಿ ಅವರಿಬ್ಬರೂ ಬದಲಾಗುತ್ತಾರೆ. ಏಕೆ..? ಹೇಗೆ..?
ಎಲ್ಲವನ್ನೂ ನಾವೇ ಹೇಳಿಬಿಟ್ಟರೆ.. ಜನವರಿ 19ಕ್ಕೆ 3 ಗಂಟೆ, 30 ದಿನ 30 ಸೆಕೆಂಡ್ ನೋಡಿ. ಜನವರಿ 19ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾದಲ್ಲಿ ಖುಷಿ, ಸಂಭ್ರಮ, ಪ್ರೇಮ, ತಲ್ಲಣ.. ಎಲ್ಲವೂ ಇದೆ.
ಮಧುಸೂದನ್ ನಿರ್ದೇಶನದ ಚಿತ್ರದಲ್ಲಿ ಅರುಣ್ ಗೌಡ, ಕಾವ್ಯಾಶೆಟ್ಟಿ ಪ್ರಮುಖ ಪಾತ್ರದಲ್ಲಿದ್ದಾರೆ. ದೇವರಾಜ್, ಸುಧಾರಾಣಿ ನಾಯಕ,ನಾಯಕಿಯರಷ್ಠೇ ಪ್ರಮುಖ ರೋಲ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ.