` ವಿಷ್ಣು ಓದಿದ ಶಾಲೆಗಾಗಿ ಅಭಿಮಾನಿಗಳ ಹೋರಾಟ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vishnu doctorate
Vishnuvardhan Image

ಸಾಹಸಸಿಂಹ ವಿಷ್ಣುವರ್ಧನ್ ಅವರು ಓದಿದ್ದ ಶಾಲೆ ಚಾಮರಾಜಪೇಟೆಯ ಮಾಡೆಲ್ ಸ್ಕೂಲ್ ಎಜುಕೇಷನ್ ಸೊಸೈಟಿ. ನಿಮಗೆ ಇನ್ನೂ ಒಂದು ವಿಷಯ ನೆನಪಿರಲಿ. ಅದು ಬೆಂಗಳೂರಿನ ಪ್ರಪ್ರಥಮ ಕನ್ನಡ ಶಾಲೆಯೂ ಹೌದು. ಇದೇ ಶಾಲೆಯಲ್ಲಿ ಖ್ಯಾತ ನಟ ರಮೇಶ್‍ಭಟ್ ಕೂಡಾ ಓದಿದ್ದರು ಎಂಬುದು ನಿಮ್ಮ ಗಮನಕ್ಕಿರಲಿ. ಈ ಎಲ್ಲ ಕಾರಣಗಳಿಂದಾಗಿ, ಈ ಶಾಲೆ ಕರ್ನಾಟಕದ ಹೆಮ್ಮೆಯಾಗಬೇಕಿತ್ತು. ಆದರೆ, ಆ ಶಾಲೆಯನ್ನೀಗ ಮುಚ್ಚಲು ಹೊರಟಿದೆ ಸರ್ಕಾ

ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಫಲಿತಾಂಶವೂ ಸರಿಯಾಗಿ ಬರುತ್ತಿಲ್ಲ ಎನ್ನುವುದು ಸರ್ಕಾರ ಶಾಲೆಯನ್ನು ನೀಡುತ್ತಿರುವ ಕಾರಣ. ಆದರೆ, ಇದೇ ಸರ್ಕಾರ 15 ವರ್ಷಗಳಿಂದ ಶಾಲೆಗೆ ಗಣಿತ ಶಿಕ್ಷಕರನ್ನು ನೀಡಿಲ್ಲ ಎನ್ನವುದನ್ನು ಮರೆತುಬಿಟ್ಟಿದೆ. ಶಿಕ್ಷಕರನ್ನೇ ನೀಡದ ಸರ್ಕಾರ, ಈಗ ಕಳಪೆ ಫಲಿತಾಂಶಕ್ಕೆ ಶಾಲೆಯನ್ನೇ ಬಲಿ ಕೊಡಲು ಮುಂದಾಗಿದೆ. ಇನ್ನೂ ಒಂದು ವಿಷಯ ನೆನಪಿರಲಿ, ಈ ಶಾಲೆಯಲ್ಲಿ ನೂರಾರು ಅನಾಥ ಮಕ್ಕಳು ವಿದ್ಯಾಭ್ಯಾಸ ಮಾಡಿದ್ದಾರೆ.

ಸರ್ಕಾರದ ಈ ನಿರ್ಧಾರದ ವಿರುದ್ಧ ವಿಷ್ಣು ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಶಿಕ್ಷಕರನ್ನೇ ನೀಡದೆ ಫಲಿತಾಂಶದ ನಿರೀಕ್ಷೆ ಮಾಡುತ್ತಿರುವ ಸರ್ಕಾರದ ಹೊಣೆಗೇಡಿತನದ ವಿರುದ್ಧ ಬೀದಿಗಿಳಿಯುತ್ತಿದ್ದಾರೆ. ಇಂದು ಡಾ.ವಿಷ್ಣು ಸೇನಾ ಸಮಿತಿ ಸದಸ್ಯರು ಚಾಮರಾಜಪೇಟೆಯ ಈ ಶಾಲೆಯ ಎದುರು ಪ್ರತಿಭಟನೆ ನಡೆಸಲಿದ್ದಾರೆ. ಕನ್ನಡ ಚಿತ್ರಕಲಾವಿದರು, ಸಾಹಿತಿಗಳೂ ಕೂಡಾ ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.

ವಿಷ್ಣುವರ್ಧನ್‍ರಂತಹ ಕನ್ನಡದ ಖ್ಯಾತ ಕಲಾವಿದ ಕಲಿತ ಶಾಲೆ, ಬೆಂಗಳೂರಿನ ಪ್ರಪ್ರಥಮ ಕನ್ನಡ ಶಾಲೆಯನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ್ದು.

Sagutha Doora Doora Movie Gallery

Popcorn Monkey Tiger Movie Gallery