Print 
humble politician, danish sait,

User Rating: 0 / 5

Star inactiveStar inactiveStar inactiveStar inactiveStar inactive
 
humble politicain nograj
Danish Sait In Humble Politician Nogaraj

ಮರೀಬೇಡಿ ತಾಯಿ.. ಗೊತ್ತಲ್ಲ.. ನಮ್ದು.. ಗೌಡ್ರೇ.. ಅಯ್ನೋರೇ.. ಈ ಸರ್ತಿ ನಮ್ ಜೊತೆ ಇರ್ಬೇಕ್ ನೀವು.. ನಿಮ್ಮ ಆಶೀರ್ವಾದ ನಮ್ ಮೇಲಿರಲಿ.. ಏನ್ ಏಳಣ್ಣ.. ನೀವ್ ಎಡಗಾಲಲ್ಲಿ ತೋರ್ಸಿದ್‍ನ ನಾನು ಬಲಗೈಯ್ಯಾಗ್ ತಕ್ಕಂಡ್ ಮಾಡ್ತೀನಿ.. ಇಂಥಾ ಡೈಲಾಗುಗಳು ಖಾದಿಧಾರಿಗಳಿಂದ ಬರೋಕೆ ಶುರುವಾಗಿದೆ ಅಂದರೆ ಎಲೆಕ್ಷನ್ ಹತ್ತಿರ ಬಂದಿದೆ ಅಂಥಾನೇ ಅರ್ಥ. 

ಆದರೆ ನಮ್ ನೊಗರಾಜ್ ಹಾಗಲ್ಲ. ಅವರು ರಾಜಕಾರಣಿಯೇ ಇರಬಹುದು. ಆದರೆ, ಹಂಬಲ್ ರಾಜಕಾರಣಿ. ಹೀಗಾಗಿ ಅವರು ಮನೆ ಮನೆಗೆ ಹೋಗ್ತಾ ಇದ್ರು ವೋಟ್ ಕೇಳ್ತಿಲ್ಲ. ಬದಲಿಗೆ.. ಬನ್ನಿ ನಮ್ ಸಿನಿಮಾ ನೋಡಿ ಅಂತಿದ್ದಾರೆ. ಮನೆ ಮನೆ ಪ್ರಚಾರ ನಡೆಸುತ್ತಿರುವುದು ಡ್ಯಾನಿಶ್ ಸೇಟ್. ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ಇವರೇನೇ. 

ಮನೆ ಮನೆಗಲ್ಲ.. ದಾರಿಯಲ್ಲಿ ಕಂಡವರಿಗೆ, ಅಂಗಡಿಗಳಿಗೆ, ಬೇಕರಿಗೆ.. ಅಡುಗೆ ಮನೆಗೂ ನುಗ್ಗಿ ನಮ್ ಸಿನಿಮಾ ನೋಡಿ ಎನ್ನುತ್ತಿದ್ದಾರೆ. ನೊಗ್‍ರಾಜ್ ಪ್ರಚಾರದ ಸ್ಟೈಲ್ ನಿರ್ಮಾಪಕರಲ್ಲಿ ಒಬ್ಬರಾದ ರಕ್ಷಿತ್ ಶೆಟ್ಟಿ ಅವರನ್ನೂ ಗಾಬರಿ ಬೀಳಿಸಿದೆ. ಎಂಥ. ಶೂಟ್ ಮಾಡ್ಲ್ಯಾ ಎಂದಿಲ್ಲ.. ಸಿನಿಮಾ ಪ್ರಚಾರ ತಾನೇ.. ಬೊಂಬಾಟ್ ಆಗಿದೆ ಅಂತಾ ಹೊಗಳಿದ್ದಾರೆ. 

ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ಇದೇ ಜನವರಿ 12ಕ್ಕೆ ತೆರೆಗೆ ಬರುತ್ತಿದೆ. ಚುನಾವಣೆ ಆಮೇಲಿರಲಿ. ರಾಜಕಾರಣಿಗಳು ಹೆಂಗಿರ್ತಾರೆ ಅನ್ನೋದನ್ನು ನೋಡೋಕೆ, ಒಂದ್ಸಲ ಸಿನಿಮಾಗೆ ಹೋಗಿಬನ್ನಿ.