ರಾಜು ಕನ್ನಡ ಮೀಡಿಯಂ. ಜನವರಿ 19ಕ್ಕೆ ರಿಲೀಸ್ ಆಗಲಿರುವ ಚಿತ್ರ. ಫಸ್ಟ್ ರ್ಯಾಂಕ್ ರಾಜು ಗುರುನಂದನ್, ರಂಗಿತರಂಗದ ಆವಂತಿಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ಕಿಚ್ಚ ಸುದೀಪ್ ಕಿಕ್ ಕೂಡಾ ಇದೆ.
ಸ್ಟೈಲಿಶ್ ಬ್ಯುಸಿನೆಸ್ ಮ್ಯಾನ್ ಆಗಿ ಕಾಣಿಸಿಕೊಂಡಿರುವ ಸುದೀಪ್ ಲುಕ್‍ಗೆ ಅಭಿಮಾನಿಗಳಂತೂ ಫಿದಾ. ಹೀಗಾಗಿಯೇ ಚಿತ್ರದ ಟ್ರೇಲರ್ ದಾಖಲೆಯನ್ನೇ ಬರೆದುಬಿಟ್ಟಿದೆ. ಯೂಟ್ಯೂಬ್, ಫೇಸ್‍ಬುಕ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಸಿನಿಮಾಗೆ 50 ಲಕ್ಷಕ್ಕೂ ಹೆಚ್ಚು ಜನ ಶುಭ ಕೋರಿದ್ದಾರೆ. ನೋಡಿದ್ದಾರೆ. ಮೆಚ್ಚಿದ್ದಾರೆ.
ಇದು ಖುಷಿ ಕೊಟ್ಟಿರೋದು ಸಹಜವಾಗಿಯೇ ನಿರ್ಮಾಪಕ ಸುರೇಶ್ ಅವರಿಗೆ. ಎಷ್ಟೆಂದರೂ ಅವರು ನಿರ್ಮಾಪಕರು. ನೋಡುವವರ ಸಂಖ್ಯೆ ಹೆಚ್ಚಿದಷ್ಟೂ ಖುಷಿ ಪಡುವವರು. ಅವರೆಲ್ಲರೂ ಥಿಯೇಟರ್‍ಗೆ ಬಂದು ಖುಷಿಪಡುವಂತಾಗಲಿ. ಕನ್ನಡ ಮೀಡಿಯಂ ರಾಜುಗೆ ಚಿನ್ನದ ಪದಕ ಕೊಡಲಿ ಎಂದು ಹಾರೈಸೋಣ.