` ಶಿವಣ್ಣ, ಸುದೀಪ್ ಜೊತೆ ಡೈನಮಿಕ್ ಸ್ಟಾರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
devraj jouns villain team
Devraj Image

ದಿ ವಿಲನ್. 2018ರಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರ. ಶಿವಣ್ಣ, ಸುದೀಪ್ & ಪ್ರೇಮ್ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ಚಿತ್ರದ ನಿರ್ಮಾಪಕ ಸಿ.ಆರ್. ಮನೋಹರ್. ಅದ್ದೂರಿಯಾಗಿ ಸಿದ್ಧವಾಗುತ್ತಿರುವ ಚಿತ್ರದ ತಾರಾಬಳಗದಲ್ಲಿ ಸ್ಟಾರ್‍ಗಳೇ ತುಂಬಿ ಹೋಗಿದ್ದಾರೆ. ಈಗ ಆ ತಾರಾಬಳಗಕ್ಕೆ ಡೈನಮಿಕ್ ಸ್ಟಾರ್ ದೇವರಾಜ್ ಸೇರ್ಪಡೆಯಾಗಿದ್ದಾರೆ.

ಚಿತ್ರದಲ್ಲಿ ಆ್ಯಮಿ ಜಾಕ್ಸನ್. ನಾಯಕಿಯ ಪಾತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆಯಂತೆ. ತಮಿಳು ನಟಿ ಸರಣ್ಯ ಪ್ರಮುಖ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೆಲ್ಲರ ನಡುವೆ ದೇವರಾಜ್ ಅವರಿಗೆ ಅತ್ಯಂತ ಪ್ರಮುಖ ಪಾತ್ರವಿದೆ. ಅವರ ಪಾತ್ರವೇನು..? ವಿಶೇಷವೇನು..? ಎಂಬ ಗುಟ್ಟನ್ನು ಪ್ರೇಮ್ ಬಿಟ್ಟುಕೊಟ್ಟಿಲ್ಲ. 

ಎಲ್ಲವನ್ನೂ ಗುಟ್ಟಾಗಿಟ್ಟೇ ಚಿತ್ರದ ಬಗ್ಗೆ ಲಕ್ಷಾಂತರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿರುವ ಪ್ರೇಮ್, ಚಿತ್ರವನ್ನು ಏಪ್ರಿಲ್‍ನಲ್ಲಿ ರಿಲೀಸ್ ಮಾಡುವ ಸಿದ್ಧತೆಯಲ್ಲಿದ್ದಾರೆ.

Adhyaksha In America Success Meet Gallery

Ellidhe Illitanaka Movie Gallery