ರಾಜು ಕನ್ನಡ ಮೀಡಿಯಂ. ಬಿಡುಗಡೆಗೆ ಮೊದಲೇ ಭರ್ಜರಿ ನಿರೀಕ್ಷೆ ಹುಟ್ಟಿಸಿದ್ದ ಚಿತ್ರ. ಚಿನಕುರುಳಿ ಪಟಾಕಿಯಂತಾ ಡೈಲಾಗುಗಳನ್ನು ಟ್ರೇಲರ್‍ನಲ್ಲಿ ಬಿಟ್ಟಿದ್ದ ಚಿತ್ರತಂಡ, ಪ್ರೇಕ್ಷಕರ ಕಿವಿಗೆ ಕಚಗುಳಿ ಇಟ್ಟಿತ್ತು. ಜೊತೆಗೆ ಚಿತ್ರತಂಡದ ಜೊತೆಗೆ ಕಿಚ್ಚನೂ ಸೇರಿಕೊಂಡ ಮೇಲೆ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಲ್ಲ, ನೂರು ಪಟ್ಟು ಹೆಚ್ಚಾಗಿತ್ತು. ಈಗ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಜನವರಿ 19ಕ್ಕೆ ತೆರೆಗೆ ಬರ್ತಾ ಇದೆ ರಾಜು ಕನ್ನಡ ಮೀಡಿಯಂ.
ಇಂಗ್ಲಿಷ್ ಗೊತ್ತಿಲ್ಲದ ಹುಡುಗನ ಪಾತ್ರದಲ್ಲಿ ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಗುರುನಂದನ್ ನಟಿಸಿದ್ದಾರೆ. ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್ ಚಿತ್ರದ ನಾಯಕಿಯರು. ಇಡೀ ಚಿತ್ರಕ್ಕೆ ಟರ್ನಿಂಗ್ ಪಾಯಿಂಟ್ ಕಿಚ್ಚ ಸುದೀಪ್. ಸುದೀಪ್ ಅವರ ಸ್ಟೈಲ್ ಅಂತೂ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹಚ್ಚುತ್ತಿದೆ. ಏನೆಂದರೂ ಜನವರಿ 19ರವರೆಗೆ ಕಾಯಬೇಕು.