3 ಗಂಟೆ 30 ದಿನ 30 ಸೆಕೆಂಡ್ ಚಿತ್ರದಲ್ಲಿ ಥ್ರಿಲ್ಲರ್ ಸ್ಟೋರಿ ಇದೆ. ಥ್ರಿಲ್ಲರ್ ಕಥೆಯೇ ಚಿತ್ರದ ಅತಿ ದೊಡ್ಡ ಆಕರ್ಷಣೆ. ಥ್ರಿಲ್ಲರ್ ಸಿನಿಮಾಗಳಲ್ಲಿ ಅತ್ಯಂತ ಮುಖ್ಯವಾಗಿ ಬೇಕಿರುವುದು ಹಿನ್ನೆಲೆ ಸಂಗೀತ. ಹಿನ್ನೆಲೆ ಸಂಗೀತ ಕೈ ಕೊಟ್ಟರೆ, ಇಡೀ ಚಿತ್ರವೇ ದಾರಿ ತಪ್ಪುವ ಭೀತಿ ಇರುತ್ತೆ. ಹೀಗಾಗಿಯೇ ಈ ಚಿತ್ರಕ್ಕೆ ಸತತ 35 ದಿನ ಬ್ಯಾಕ್‍ಗ್ರೌಂಡ್ ಮ್ಯೂಸಿಕ್‍ಗಾಗಿಯೇ ಕೆಲಸ ಮಾಡಿದೆ ಈ ಟೀಂ.
ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಅವರಿಗಂತೂ ಇದೊಂದು ಮರೆಯಲಾಗದ ಅನುಭವ. ಪ್ರತಿ ದೃಶ್ಯಕ್ಕೂ ಸರಿಯಾದ ಬಿಟ್ಸ್ ಕೂಡಿಸುವ ಕೆಲಸ ಸುಲಭದ್ದಾಗಿರಲಿಲ್ಲ ಎಂದಿದ್ದಾರೆ ಶ್ರೀಧರ್. ಸೆಕೆಂಡು ಸೆಕೆಂಡುಗಳಲ್ಲಿ ಚಿತ್ರದ ಮೂಡ್ ಬದಲಾಗುತ್ತೆ. ಅದಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತವೂ ಬದಲಾಗಬೇಕು. ಅದು ಸಹಜವಾಗಿ ಕೇಳಿಸಬೇಕು. ಯಾವುದೇ ಸಂಗೀತ ನಿರ್ದೇಶಕನಿಗೆ ಅದೊಂದು ದೊಡ್ಡ ಸವಾಲು ಎನ್ನುವುದು ಶ್ರೀಧರ್ ಅವರ ಆಭಿಪ್ರಾಯ.
ಅರೂ ಗೌಡ, ಕಾವ್ಯಾಶೆಟ್ಟಿ ನಾಯಕ-ನಾಯಕಿಯರಾಗಿದ್ದರೆ, ದೇವರಾಜ್,ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಡಕಲ್ಲು ಗುಡ್ಡದ ಚಂದ್ರಶೇಖರ್, ಯಮುನಾ, ಮೇಘನಾ, ಜಯಲಕ್ಷ್ಮೀ ಪಾಟೀಲ್, ಸುಂದರ್ ಮೊದಲಾದವರು ನಟಿಸಿರುವ ಚಿತ್ರದಲ್ಲಿ ಸಂಗೀತದ ಪಾತ್ರ ದೊಡ್ಡದು ಎಂದು ಖುಷಿಪಟ್ಟಿದ್ದಾರೆ ಅರೂಗೌಡ.