Print 
humble politician, danish sait,

User Rating: 0 / 5

Star inactiveStar inactiveStar inactiveStar inactiveStar inactive
 
nograj trend suprprises everyone
Humble Politician Nograj Trend

ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್. ಸಾದ್ ಖಾನ್ ನಿರ್ದೇಶನದ ಈ ಚಿತ್ರದ ಹೀರೋ ದಾನಿಶ್ ಸೇಠ್. ಆರ್‍ಸಿಬಿಯ ಮಿಮಿಕ್ರಿ ಮೂಲಕ ದೇಶದ ಕ್ರಿಕೆಟ್ ಅಭಿಮಾನಿಗಳ ಫೇವರಿಟ್ ಆದ ದಾನಿಶ್ ಸೇಠ್ ಅವರನ್ನು ಡ್ಯಾನಿಶ್ ಸೇಠ್ ಎಂದು ಕರೆಯುವವರೂ ಇದ್ದಾರೆ. ಈಗ ನೊಗ್‍ರಾಜ್‍ಗೆ ಪ್ರಧಾನಿ ಮೋದಿ, ವಿರಾಟ್ ಕೊಹ್ಲಿ, ಉ.ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜಾಂಗ್ ಉನ್ ಸೇರಿದಂತೆ ಗಣ್ಯಾತಿಗಣ್ಯರೆಲ್ಲ ಶುಭ ಕೋರಿದ್ದಾರೆ.

ಇರಬಹುದು ಬಿಡಿ, ಆರ್‍ಸಿಬಿಯ ಸ್ಟಾರ್ ಅಲ್ಲವಾ..? ವಿಶ್ ಮಾಡಿದ್ದರೂ ಮಾಡಿರಬಹುದು ಎಂದುಕೊಳ್ಳಬೇಡಿ. ಇದು ಮಿಕ್ಸ್ ಮಸಾಲಾ. ಅಮೆರಿಕ ಅಧ್ಯಕ್ಷರ ಕೈಗೇ ಸಿಕ್ಕದ ಕಿಮ್ ಜಾಂಗ್ ಉನ್, ನೊಗ್‍ರಾಜ್‍ಗೆ ಸಿಕ್ತಾನಾ..? ರಾಜಕಾರಣಿಗಳು ಹೇಗೆಲ್ಲ ಗಿಮಿಕ್ ಮಾಡ್ತಾರೆ ಅನ್ನೋದಕ್ಕೆ ಈ ಫೋಟೋಗಳು ಸಾಕ್ಷಿ ನುಡಿಯುತ್ತವೆ.

ರಾಜಕೀಯ ವಿಡಂಬನೆಯ ಕಥೆ ಇಟ್ಟುಕೊಂಡಿರುವ ಹಂಬಲ್ ಪೊಲಿಟಿಷಿಯನ್, ಥಿಯೇಟರ್‍ಗೆ ಬರೋಕೆ ರೆಡಿಯಾಗಿದ್ದಾನೆ. ಯಾರಿಗೆ ಗೊತ್ತು..? ಅವನ ಜೊತೆ ಸ್ಟಾರ್, ಸೂಪರ್ ಸ್ಟಾರ್, ಮೆಗಾಸ್ಟಾರ್‍ಗಳೆಲ್ಲ ಬರಬಹುದು.  ಅಮೆರಿಕ ಅಧ್ಯಕ್ಷರೇ ನೊಗ್‍ರಾಜ್‍ಗೆ ಶುಭ ಕೋರಿದರೂ ಅಚ್ಚರಿ ಬೇಡ.