ಚಂದ್ರಗುಪ್ತ ಮೌರ್ಯನ ಕುರಿತ ಸಿನಿಮಾ ಮಾಡುವ ಆಸೆಯಿದೆ. ಪುನೀತ್, ಸುದೀಪ್ & ಉಪೇಂದ್ರ ಅವರನ್ನು ಹಾಕಿಕೊಂಡು ಸಿನಿಮಾ ಮಾಡಬೇಕು. ಸುದೀಪ್ ಅಲೆಕ್ಸಾಂಡರ್ ಪಾತ್ರ ಮಾಡಿದರೆ ಚೆಂದ ಎಂದೆಲ್ಲ ಕನಸು ಹಂಚಿಕೊಂಡಿದ್ದರು ನಿರ್ಮಾಪಕ ಮುನಿರತ್ನ. ಈ ಕುರಿತು ನಟ ಪುನೀತ್ ರಾಜ್‍ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಚಂದ್ರಗುಪ್ತನಾಗುವ ಆಸೆ ನನಗೂ ಇದೆ. ಆದರೆ, ಈ ಬಗ್ಗೆ ನನಗೇನೂ ಗೊತ್ತಿಲ್ಲ. ಚಿತ್ರದ ಬಗ್ಗೆ ಮುನಿರತ್ನ ಅವರ ಹೇಳಿಕೆಗಳನ್ನು ಪತ್ರಿಕೆಗಳಿಂದಷ್ಟೇ ತಿಳಿದುಕೊಂಡಿದ್ದೇನೆ. ಅವರ ಆಸೆ, ಆಲೋಚನೆ ಅದ್ಭುತ ಎಂದಿದ್ದಾರೆ ಪುನೀತ್.
ಐತಿಹಾಸಿಕ ಚಿತ್ರಗಳನ್ನು ಮಾಡುವುದು ದೊಡ್ಡ ಸವಾಲು. ತಾಂತ್ರಿಕತೆ ಅದ್ಬುತವಾಗಿರಬೇಕು ಎಂದು ಬಾಹುಬಲಿ ಸಿನಿಮಾ ಉದಾಹರಿಸುವ ಪುನೀತ್, ಕಥೆಯ ಜೊತೆ ತಾಂತ್ರಿಕವಾಗಿ ಕೂಡಾ ಶ್ರೀಮಂತಿಕೆ ಇಲ್ಲದೇ ಹೋದರೆ, ಐತಿಹಾಸಿಕ ಚಿತ್ರ ವಿಫಲವಾಗಬಹುದು ಎಂಬ ಆತಂಕ ವ್ಯಕ್ತಪಡಿಸುತ್ತಾರೆ. ಕುರುಕ್ಷೇತ್ರ ಚಿತ್ರದ ಸಾಹಸ ಆ ನಿಟ್ಟಿನಲ್ಲಿ ಯಶಸ್ವಿಯಾಗಲಿದೆ. ನಿಜಕ್ಕೂ ಕನ್ನಡದಲ್ಲಿ ಅದೊಂದು ದೊಡ್ಡ ಸಾಹಸ ಎಂದು ಕುರುಕ್ಷೇತ್ರ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
Related Articles :-