ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ತಿದ್ದಿದ್ದಾರೆ. ಹೊಸ ದಾಖಲೆಗಳನ್ನು ಬರೆದಿದ್ದಾರೆ. ಹಲವರ ಹಣೆ ಬರಹ ಬದಲಾಯಿಸಿದ್ದಾರೆ. ಅದರೆ, ಇದು ಆ ದಾಖಲೆಗಳ ಕಥೆಯಲ್ಲ. ಇದು ನಟಿಯೊಬ್ಬರು ಹೆಸರನ್ನೇ ಬದಲಾಯಿಸಿಕೊಂಡ ಕಥೆ.
ಬಿಗ್‍ಬಾಸ್‍ನಲ್ಲಿರುವ ನಟಿ ಆದಿತಿ, ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದೇ ಸುದೀಪ್ ಅವರಿಂದ. ಏಕೆಂದರೆ, ಅವರ ಮೂಲ ಹೆಸರು ಸುದೀಪನಾ. ಕಾಲೇಜ್‍ನಲ್ಲಿದ್ಧಾಗ ಎಲ್ಲರೂ ಅವರನ್ನು ಕಿಚ್ಚ, ಸುದೀಪ್ ಎಂದೇ ರೇಗಿಸುತ್ತಿದ್ದರಂತೆ. ಇದರಿಂದಾಗಿ ಚಿತ್ರರಂಗಕ್ಕೆ ಬಂದ ಮೇಲೆ ತಮ್ಮ ಹೆಸರನ್ನು ಆದಿತಿ ಎಂದು ಬದಲಿಸಿಕೊಂಡೆ ಎಂದು ಹೇಳಿಕೊಂಡಿದ್ದಾರೆ ಆದಿತಿ.
ನಿಮ್ಮಿಂದಾಗಿ ನಾನು ಹೆಸರು ಬದಲಾಯಿಸಿಕೊಳ್ಳಬೇಕಾಯಿತು ಎಂದು ಹೇಳಿದಾಗ ಕಕ್ಕಾಬಿಕ್ಕಿಯಾಗಿದ್ದ ಸುದೀಪ್, ನಂತರ ವಿಚಾರ ಕೇಳಿ ನಕ್ಕರು.