ರಾಜಕುಮಾರ, 2017ರ ಸೂಪರ್ ಡ್ಯೂಪರ್ ಹಿಟ್ ಚಿತ್ರ. ಕನ್ನಡ ಚಿತ್ರರಂಗದ ಬಾಕ್ಸಾಫೀಸ್ ದಾಖಲೆಗಳನ್ನೆಲ್ಲ ದೂಳೀಪಟ ಮಾಡಿದ ಈ ಸಿನಿಮಾದ ರೂವಾರಿ ನಿರ್ದೇಶಕ ಸಂತೋಷ್ ಆನಂದ್ ರಾಮ್. ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ರಾಜಕುಮಾರ ಪುನೀತ್ ರಾಜ್‍ಕುಮಾರ್. ಈ ಜೋಡಿ ಈಗ ಪುನಃ ಒಂದಾಗುತ್ತಿದೆ.
ಕಥೆ ಬರೆಯುತ್ತಿದ್ದೇನೆ ಎಂದು ಹೇಳಿದ್ದ ಸಂತೋಷ್ ಆನಂದ್ ರಾಮ್, ಕಥೆ, ಚಿತ್ರಕಥೆ ಸಿದ್ಧಪಡಿಸಿದ್ದು, ಅದು ಪುನೀತ್ ರಾಜ್‍ಕುಮಾರ್‍ಗೆ ಇಷ್ಟವಾಗಿದೆ. ಹೊಂಬಾಳೆ ಬ್ಯಾನರ್‍ನಲ್ಲಿಯೇ ಸಿನಿಮಾ ರೆಡಿಯಾಗುತ್ತಿದೆ. ಮಾನವೀಯ ಸಂಬಂಧ, ಮೌಲ್ಯಗಳೇ ಚಿತ್ರದ ಪ್ರಮುಖ ಭಾಗ ಎಂದಿದ್ದಾರೆ ಸಂತೋಷ್ ಆನಂದ್‍ರಾಮ್.
ರಾಜಕುಮಾರ ಚಿತ್ರದಲ್ಲಿ ವೃದ್ಧರ ಕಣ್ಣೀರ ಕಥೆಯನ್ನು ಪರಿಣಾಮಕಾರಿಯಾಗಿ ಹೇಳಿ, ಸಂದೇಶ ನೀಡಿದ್ದ ಸಂತೋಷ್, ಇಲ್ಲಿ ಯಾವ ಸಂದೇಶ ಕೊಡುತ್ತಾರೆ ಎಂಬ ಕುತೂಹಲವಂತೂ ಖಂಡಿತಾ ಇದೆ. ರಾಜಕುಮಾರ ಚಿತ್ರಕ್ಕಿಂತ ಇದು ದೊಡ್ಡ ದಾಖಲೆ ಸೃಷ್ಟಿಸಲಿದೆ ಎಂಬುದು ನಿರ್ಮಾಪಕ ವಿಜಯ್ ಕಿರಗಂದೂರು ನಿರೀಕ್ಷೆ.