ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ... ಮೂವರೂ ಒಟ್ಟಿಗೇ.. ಒಂದೇ ಸಿನಿಮಾದಲ್ಲಿ ನಟಿಸ್ತಾರಾ..? ಹಾಗೇನಾದರೂ ಆಗಿಬಿಟ್ಟರೆ.. ಅದು ಚಿತ್ರರಂಗದ ಪಾಲಿನ ದೊಡ್ಡ ಹಬ್ಬವೇ ಆಗೋದು ಖಂಡಿತಾ. ಅದೊಂಥರಾ ಸಂಕ್ರಾಂತಿ, ದೀಪಾವಳಿ, ಯುಗಾದಿಯನ್ನು ಒಟ್ಟಿಗೇ ಆಚರಿಸಿದಂತೆ. ಆದರೆ, ಅಂಥಾದ್ದೊಂದು ಕನಸು ಕಂಡಿದ್ದಾರೆ ನಿರ್ಮಾಪಕ ಮುನಿರತ್ನ.
ಸದ್ಯಕ್ಕೆ ಕುರುಕ್ಷೇತ್ರ ಚಿತ್ರವನ್ನು ಸಿದ್ಧ ಮಾಡುತ್ತಿರುವ ಮುನಿರತ್ನ ಅವರಿಗೆ ಚಾಣಕ್ಯ-ಚಂದ್ರಗುಪ್ತರ ಕಥೆಯನ್ನು ಸಿನಿಮಾ ಮಾಡಬೇಕು ಎಂಬ ಆಸೆ ಹುಟ್ಟಿಕೊಂಡಿದೆ. ಸುದೀಪ್, ಅಲೆಕ್ಸಾಂಡರ್ ಪಾತ್ರ ಮಾಡಬೇಕು ಅನ್ನೊದು ಮುನಿರತ್ನ ಅವರ ಆಸೆ. ಮಗಧ ಸಾಮ್ರಾಜ್ಯ ಸ್ಥಾಪನೆಯ ಆ ಕಥೆಯನ್ನು ಅದ್ದೂರಿಯಾಗಿ ತೆರೆಯ ಮೇಲೆ ತರಬೇಕು ಅನ್ನೋದು ಮುನಿರತ್ನ ಕನಸು.
ಕುರುಕ್ಷೇತ್ರ ಚಿತ್ರ ಮಾರ್ಚ್‍ನಲ್ಲಿ ಬಿಡುಗಡೆಯಾಗಲಿದ್ದು, ನಂತರ ಚುನಾವಣೆ ಬರಲಿದೆ. ಚುನಾವಣೆ ಮುಗಿದ ಮೇಲೆ ಈ ಕಥೆಯತ್ತ ಗಮನ ಹರಿಸೋದಾಗಿ ಹೇಳಿದ್ದಾರೆ ಮುನಿರತ್ನ. ಮುನಿರತ್ನ ಕನಸು ನನಸಾಗಲಿ ಎಂದು ಅಭಿಮಾನಿಗಳೂ ಕೇಳಿಕೊಳ್ತಾರೆ ಬಿಡಿ.