ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಅಂತಿಮ ಹಂತದಲ್ಲಿದೆ. ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಸಿದ್ಧವಾಗುತ್ತಿರುವ ಸಿನಿಮಾ, 20 ಸೆಟ್ಗಳಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ದಿನಕ್ಕೆ 700ರಿಂದ 800 ಕೆಲಸಗಾರರು ಕೆಲಸ ಮಾಡುತ್ತಿರುವುದು ವಿಶೇಷ.
ಪತ್ರಕರ್ತರನ್ನೆಲ್ಲ ಹೈದರಾಬಾದ್ನ ಸೆಟ್ಗೆ ಕರೆಸಿಕೊಂಡು ಚಿತ್ರದ ಶೂಟಿಂಗ್ ವೈಭವ ಪರಿಚಯಿಸಿದ್ದಾರೆ ಮುನಿರತ್ನ. ಅಂಬಾರಿ ಮೇಲೆ ಬರುತ್ತಿರುವ ದರ್ಶನ್, ದುರ್ಯೋಧನನಿಗೆ ಬಹುಪರಾಕ್ ಹೇಳುವ ದೃಶ್ಯ, ಆ ದೃಶ್ಯದ ರಾಜವೈಭವ ಎಲ್ಲವನ್ನೂ ಅದ್ದೂರಿಯಾಗಿ ತರಲಾಗುತ್ತಿದೆ.
ಚಿತ್ರದ ಸೆಟ್ಗೆ ಬೇರೆ ಚಿತ್ರರಂಗದ ಹಲವಾರು ಜನ ಬಂದು ನೋಡಿಕೊಂಡು ಹೋಗಿದ್ದಾರೆ. ಇಷ್ಟು ಅದ್ದೂರಿತನ ನಿಮ್ಮ ಕನ್ನಡಕ್ಕೆ ವರ್ಕೌಟ್ ಆಗುತ್ತಾ ಎಂದು ಹಲವರು ಕೇಳಿದ್ದಾರಂತೆ. ಅದನ್ನು ಸವಾಲಾಗಿ ತೆಗೆದುಕೊಂಡು ಸಿನಿಮಾ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ ಮುನಿರತ್ನ.