ತಮಿಳರ ಆರಾಧ್ಯದೈವವಾಗಿರುವ ಸೂಪರ್ ಸ್ಟಾರ್ ರಜಿನಿಕಾಂತ್, ಸರಳತೆಯನ್ನೇ ಮೈಗೂಡಿಸಿಕೊಂಡವರು. ಡಿ.31ಕ್ಕೆ ರಾಜಕೀಯ ಪ್ರವೇಶ ಕುರಿತಂತೆ ಅಧಿಕೃತವಾಗಿ ಪ್ರಕಟಿಸುವುದಾಗಿ ಹೇಳಿರುವ ರಜಿನಿಕಾಂತ್, ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ರಜಿನಿ ದರ್ಶನಕ್ಕೆ ಬಂದ ಆಭಿಮಾನಿಗಳು ಕಾಲಿಗೆ ಬಿದ್ದು ನಮಸ್ಕರಿಸಿದ್ದನ್ನು ಕಂಡ ರಜಿನಿಕಾಂತ್, ಅಭಿಮಾನಿಗಳಿಗೆ ದೇವರು, ತಂದೆ, ತಾಯಿ ಕಾಲಿಗೆ ಮಾತ್ರ ಬಿದ್ದು ನಮಸ್ಕರಿಸಿ. ಜನಪ್ರಿಯತೆ, ಅಧಿಕಾರದ ಕಾರಣಕ್ಕೆ ಕಾಲಿಗೆ ಬೀಳಬೇಡಿ ಎಂದು ಮನವಿ ಮಾಡಿದರು. ಆದರೂ ಅಭಿಮಾನಿಗಳು ಕೇಳಲಿಲ್ಲ. ಆಗ ಸ್ವತಃ ತಮ್ಮ ಅನುಭವ ಹೇಳಿಕೊಂಡ ರಜಿನಿ, ಅಣ್ಣಾವ್ರನ್ನು ಸ್ಮರಿಸಿದರು.
ತಾವು ಮೊದಲ ಬಾರಿ ಡಾ.ರಾಜ್‍ರನ್ನು ಭೇಟಿ ಮಾಡಿದಾಗ, ಅವರಾಗಲೇ ಸೂಪರ್ ಸ್ಟಾರ್. ನನಗಾಗ 16ನೇ ವಯಸ್ಸು. ಅವರನ್ನು ಆ ದಿನ ಉತ್ಸಾಹದಿಂದ ಹೋಗಿ ಮುಟ್ಟಿ ಪುಳಕಗೊಂಡಿದ್ದೆ. ಎಂಜಿಆರ್, ಶಿವಾಜಿಗಣೇಶನ್ ಇಬ್ಬರೂ ಸೇರಿದರೆ ಅದು ಡಾ.ರಾಜ್‍ಕುಮಾರ್. ಅವರ ಸರಳ ವ್ಯಕ್ತಿತ್ವ ನನಗೆ ಸದಾ ಸ್ಫೂರ್ತಿ ಎಂದು ಸ್ಮರಿಸಿದ್ದಾರೆ.