ರಾಜಕುಮಾರ ಮತ್ತು ರಾಮಾಚಾರಿ ಎಂಬ ಎರಡು ಸೂಪರ್ ಹಿಟ್ ಸಿನಿಮಾ ಕೊಟ್ಟ ಸಂತೋಷ್ ಅನಂದ್‍ರಾಮ್, ಎಂಗೇಜ್‍ಮೆಂಟ್‍ನ್ನೂ ಮಾಡಿಕೊಂಡು ಮದುಮಗನಾಗುತ್ತಿದ್ದಾರೆ. ಇದೆಲ್ಲದರ ನಡುವೆ ಹೊಸ ಚಿತ್ರಕ್ಕೆ ಕಥೆ, ಚಿತ್ರಕಥೆಯಲ್ಲಿ ಬ್ಯುಸಿಯಾಗಿದ್ದ ಸಂತೋಷ್, ಅದಕ್ಕಾಗಿ ಕೆಲವು ತಿಂಗಳುಗಳನ್ನೇ ವ್ಯಯಿಸಿದ್ದಾರೆ. ಈಗ ಕಥೆ, ಚಿತ್ರಕಥೆ ಫೈನಲ್ ಆಗಿದೆಯಂತೆ.
ಸಂತೋಷ್ ಆನಂದ್‍ರಾಮ್ ಅವರ ಹೊಸ ಸಿನಿಮಾ ಮತ್ತೊಮ್ಮೆ ಹೊಂಬಾಳೆ ಬ್ಯಾನರ್‍ನಲ್ಲಿಯೇ ಬರಲಿದೆ. ವಿಜಯ್ ಕಿರಗಂದೂರು ಅವರೇ ಚಿತ್ರದ ನಿರ್ಮಾಪಕರು. ಆದರೆ, ಹೀರೋ ಯಾರು ಎನ್ನುವುದು ಸಸ್ಪೆನ್ಸ್ ಆಗಿಯೇ ಇದೆ. ಎಲ್ಲವೂ ಓಕೆ ಆಗಿದೆ. ತಾಂತ್ರಿಕ ಕಾರಣಗಳಿಂದಾಗಿ ಹೀರೋ ಹೆಸರು ಹೇಳುತ್ತಿಲ್ಲ. ಕೆಲವೇ ದಿನಗಳಲ್ಲಿ ಎಲ್ಲವನ್ನೂ ನಿಮ್ಮ ಮುಂದಿಡಲಿದ್ದೇವೆ ಎಂಬ ಭರವಸೆ ಸಂತೋಷ್ ಅವರಿಂದ ಸಿಕ್ಕಿದೆ.
ಅದು ಯಾರು..? ಪುನೀತ್ ರಾಜ್‍ಕುಮಾರಾ..? ಶಿವರಾಜ್ ಕುಮಾರಾ..? ಗೊತ್ತಿಲ್ಲ. ಗಾಳಿಮಾತು ನಂಬಬೇಡಿ. ಹೊಸ ವರ್ಷಕ್ಕೆ ನಾನೇ ಹೇಳ್ತೀನಿ ಅಂದಿದ್ದಾರೆ ಸಂತೋಷ್ ಆನಂದ್‍ರಾಮ್.