ರಾಕಿಂಗ್ ಸ್ಟಾರ್ ಯಶ್ ಇಡೀ ವರ್ಷ ಕೆಜಿಎಫ್‍ನಲ್ಲೇ ಮುಳುಗಿಬಿಟ್ಟರು. 2017ರಲ್ಲಿ ಯಶ್ ಅವರ ಚಿತ್ರ ತೆರೆಗೆ ಬರಲೇ ಇಲ್ಲ. ಕೆಜಿಎಫ್ ಕೂಡಾ ರಿಲೀಸ್ ಆಗುವುದು 2018ರಲ್ಲಿ. ಅದು ಮುಗಿದ ನಂತರ ಯಶ್ ಅವರ ಮುಂದಿನ ಚಿತ್ರ ಯಾವುದು ಅನ್ನೋ ಪ್ರಶ್ನೆಗೆ, ಯಶ್ ಉತ್ತರ ಕಂಡುಕೊಂಡಿರುವುದು ನರ್ತನ್ ಅವರಲ್ಲಿ.
ಮಫ್ತಿ ಸಿನಿಮಾ ಮೂಲಕ ಮೊದಲ ಚಿತ್ರದಲ್ಲೇ ಭರ್ಜರಿ ಹಿಟ್ ಕೊಟ್ಟ ನಿರ್ದೇಶಕ ನರ್ತನ್, ಶಿವರಾಜ್ ಕುಮಾರ್ ಅವರನ್ನು ವಿಭಿನ್ನವಾಗಿ ತೋರಿಸಿ ಗೆದ್ದರು. ಈಗ ಮುಂದಿನ ಚಿತ್ರಕ್ಕೆ ಸಿದ್ಧರಾಗುತ್ತಿದ್ದಾರೆ. ನರ್ತನ್ ಅವರ ಹೊಸ ಚಿತ್ರಕ್ಕೂ ಜಯಣ್ಣ-ಭೋಗೇಂದ್ರ ಅವರೇ ನಿರ್ಮಾಪಕರು. ಯಶ್ ಹೀರೋ.
ಈಗಾಗಲೇ ಕಥೆ ಸಿದ್ಧಪಡಿಸುವಂತೆ ಯಶ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಕೆಜಿಎಫ್ ಮುಗಿಯುವ ವೇಳೆಗೆ ನರ್ತನ್ ಹೊಸ ಸ್ಕ್ರಿಪ್ಟ್‍ನೊಂದಿಗೆ ಸಿದ್ಧರಾಗಿರುತ್ತಾರೆ. ಈ ಹಿಂದೆ ಮಾಸ್ಟರ್ ಪೀಸ್‍ನಲ್ಲಿ ಯಶ್ ಅವರ ಜೊತೆ ಕೆಲಸ ಮಾಡಿದ್ದ ನರ್ತನ್‍ಗೆ, ಯಶ್ ಅವರ ಜೊತೆ ಉತ್ತಮ ಸ್ನೇಹವೂ ಇದೆ.