ನಿಮಗೆ ಲೈಂಗಿಕ ಸಮಸ್ಯೆಗಳಿವೆಯೇ.. ಸ್ತ್ರೀ ರೋಗ ಸಮಸ್ಯೆಗಳಿವೆಯೇ.. ವೈದ್ಯರು ಸಿಗುತ್ತಿಲ್ಲವೇ.. ತಡಮಾಡಬೇಡಿ. ಇದೇ ಶುಕ್ರವಾರದಿಂದ ನಿಮಗೆ ಹೊಸ ಡಾಕ್ಟರ್ ಸಿಗುತ್ತಿದ್ದಾರೆ. ಅವರ ಹೆಸರು ಡಾ.ಗಣೇಶ್. ಗೋಲ್ಡನ್ ಸ್ಟಾರ್ ಗಣೇಶ್, ಈಗ ಡಾ.ಗಣೇಶ್ ಆಗಿದ್ದಾರೆ. ಅವರೀಗ ಗೈನಕಾಲಜಿಸ್ಟ್. ಸ್ತ್ರೀರೋಗ ತಜ್ಞರು. ಗರ್ಭಧಾರಣೆ, ಶಿಶುಪಾಲನೆ, ಹೆರಿಗೆ ಎಲ್ಲದಕ್ಕೂ ಅವರು ಚಿಕಿತ್ಸೆ ಕೊಡ್ತಾರೆ. ಚಿಕಿತ್ಸೆ ಕೊಡದೇ ಹೋದರೂ ಚಮಕ್ ಅಂತೂ ಗ್ಯಾರಂಟಿ.
ನಗಬೇಡಿ, ಇದೂ ಚಮಕ್ಕೇ. ಚಮಕ್ನಲ್ಲಿ ಸಿಂಪಲ್ ಸುನಿ, ರಿಯಲ್ ಲೈಫಲ್ಲಿ ಡಿಪ್ಲೋಮಾ ಎಂಜಿನಿಯರಿಂಗ್ ಒದಿರುವ ಗಣೇಶ್ರನ್ನು ಎಂಬಿಬಿಎಸ್ ಓದಿಸಿ ಡಾಕ್ಟರ್ ಮಾಡಿಸಿದ್ದಾರೆ. ಸ್ಟೆತಾಸ್ಕೋಪು ಹಿಡಿಯೋದು, ಮೆಡಿಕಲ್ ಸ್ಟೋರ್ನವರಿಗೆ ಮಾತ್ರ ಅರ್ಥವಾಗುವ ರೀತಿಯಲ್ಲಿ ಪ್ರಿಸ್ಕಿಪ್ಷನ್ ಬರೆಯೋದು ಮೊದಲಾದ ಡಾಕ್ಟರ್ ಕಸುಬುದಾರಿಕೆಗಳನ್ನು ಗಣೇಶ್ ಕಲಿತಿದ್ದಾರೆ.
ಈ ಡಾಕ್ಟರ್ಗೆ ಚಮಕ್ ಕೊಡೋದು ಅಂದ, ಅದೃಷ್ಟದ ಗೊಂಬೆ ರಶ್ಮಿಕಾ. ಇವರೆಲ್ಲರನ್ನೂ ಒಟ್ಟಿಗೇ ಕೂರಿಸಿರೋದು ಚಂದ್ರಶೇಖರ್. ಚಮಕ್, ಚಮಕ್ ಕೊಡೋಕೆ ರೆಡಿ.