3 ದಿನ, 30 ಗಂಟೆ, 30 ಸೆಕೆಂಡು ಚಿತ್ರದ ಬಿಡುಗಡೆ ಹತ್ತಿರವಾಗುತ್ತಿದೆ. ಚಿತ್ರದ ಕಥೆ, ಟ್ರೇಲರ್ ಆನ್ಲೈನ್ನಲ್ಲಿ ಮೋಡಿ ಮಾಡಿಬಿಟ್ಟಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಮೂರೇ ದಿನದಲ್ಲಿ ಟ್ರೇಲರ್ ಮೆಚ್ಚಿದವರು 5 ಲಕ್ಷಕ್ಕೂ ಹೆಚ್ಚು ಜನ.
ಚಿತ್ರದ ಟೈಟಲ್ ಟ್ರ್ಯಾಕ್ ಅಂತೂ ಸೂಪರ್ ಹಿಟ್ ಆಗಿದೆ. ಚಿತ್ರದ ಟೈಟಲ್ ಟ್ರ್ಯಾಕ್ನ್ನು ಈಗಾಗಲೇ ಒಂದು ಮಿಲಿಯನ್ಗೂ ಹೆಚ್ಚು ಮಂದಿ ನೋಡಿ ಮೆಚ್ಚಿದ್ದಾರೆ. ಅರುಣ್ ಗೌಡ, ಕಾವ್ಯಾ ಶೆಟ್ಟಿ ಅಭಿನಯದ ಚಿತ್ರ ಬಿಡುಗಡೆ ಸಮೀಪಿಸುತ್ತಿದ್ದಂತೆ ಕಾಲೇಜು ಕುಮಾರ ಕುಮಾರಿಯರ ಟ್ರೆಂಡ್ ಆಗಿಬಿಟ್ಟಿದೆ.
ಯವ ಸಮೂಹವನ್ನೇ ದೃಷ್ಟಿಯಲ್ಲಿಟ್ಟುಕೊಂಡು ನಿರೂಪಿಸಿರುವ ಟ್ರೇಲರ್ನಲ್ಲಿ ಯುವಕ, ಯುವತಿಯರ ಕಿವಿಗೆ ರಸಗವಳ ಕೊಟ್ಟಿದ್ದಾರೆ ನಿರ್ದೇಶಕರು. ಕುತೂಹಲವನ್ನೂ ಮೂಡಿಸಿಬಿಟ್ಟಿದ್ದಾರೆ.
ಚಿತ್ರದಲ್ಲಿ ಬಳಸಿಕೊಳ್ಳಲು ಸಾಧ್ಯವಾಗದ ಕೆಲವು ಡಿಲೀಟೆಡ್ ಸೀನ್ಗಳನ್ನೂ ಯೂಟ್ಯೂಬ್ಗೆ ಬಿಡುವ ಮೂಲಕ ಕುತೂಹಲವನ್ನು ಹೆಚ್ಚಿಸುತ್ತಲೇ ಇದೆ 3 ಗಂಟೆ, 30 ದಿನ 30 ಸೆಕೆಂಡು.