ಚಿತ್ರನಟ ಕಮಲ್ ಹಾಸನ್, ತಮಿಳುನಾಡಿಗಷ್ಟೇ ಸೀಮಿತವಲ್ಲ. ಇಡೀ ಭಾರತೀಯರಿಗೇ ಚಿರಪರಿಚಿತ ಮುಖ. ಅದ್ಭುತ ಕಲಾವಿದ ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗ ರಾಜಕೀಯಕ್ಕೂ ಎಂಟ್ರಿ ಕೊಟ್ಟಿರುವ ಕಮಲ್ ಹಾಸನ್ ಅವರ ಪತ್ನಿ ಈಗ ಬೀದಿಗೆ ಬಿದ್ದಿದ್ದಾರೆ. ಕಮಲ್ ಅವರ ಪತ್ನಿ ಸಾರಿಕಾ ಅವರಿಗೆ ಈಗ ಮುಂಬೈನಲ್ಲಿ ಮನೆ ಕೂಡಾ ಇಲ್ಲದಂತಾಗಿದೆ.
ಸಾರಿಕಾ ಅವರ ತಾಯಿ ಕಮಲಾ ಠಾಕೂರ್ ಮುಂಬೈನಲ್ಲಿ ವಾಸವಾಗಿದ್ದರು. ಮುಂಬೈನಲ್ಲಿ ಫ್ಲ್ಯಾಟ್, ಪುಣೆ ಸಮೀಪ ಸುಮಾರು 300 ಎಕರೆಯಷ್ಟು ಜಮೀನು ಸೇರಿದಂತೆ ನೂರಾರು ಕೋಟಿ ಮೌಲ್ಯದ ಆಸ್ತಿಯೂ ಇತ್ತು. ಆದರೆ, ನಿಧನರಾಗುವ ಮುನ್ನ ಅವರು ತಮ್ಮ ಇಡೀ ಆಸ್ತಿಯನ್ನು ತಮ್ಮ ಮಗಳಿಗಾಗಲೀ, ಮೊಮ್ಮಕ್ಕಳಾದ ಶೃತಿ ಹಾಸನ್ ಅಥವಾ ಅಕ್ಷರಾ ಹಾಸನ್‍ಗಾಗಲೀ ಬರೆದಿಲ್ಲ. ಬದಲಿಗೆ ತಮ್ಮನ್ನು ನೋಡಿಕೊಳ್ಳುತ್ತಿದ್ದ ಡಾಕ್ಟರ್ ವಿಕ್ರಮ್ ಠಕ್ಕರ್ ಎಂಬುವವರಿಗೆ ವಿಲ್ ಮಾಡಿಟ್ಟಿದ್ದಾರೆ.
ತಾಯಿಯ ಜೊತೆ ಸಾರಿಕಾ ಅವರ ಸಂಬಂಧ ಅಷ್ಟೇನೂ ಉತ್ತಮವಾಗಿರಲಿಲ್ಲ. ಇನ್ನು ಮಕ್ಕಳಾದ ಶೃತಿ ಹಾಸನ್, ಮುಂಬೈನಲ್ಲೇ ಪ್ರತ್ಯೇಕ ಫ್ಲ್ಯಾಟ್‍ನಲ್ಲಿ ವಾಸವಾಗಿದ್ದಾರೆ. ಮತ್ತೊಬ್ಬ ಮಗಳು ಅಕ್ಷರಾ ಹಾಸನ್, ತಂದೆಯ ಜೊತೆ ಚೆನ್ನೈನಲ್ಲಿದ್ದಾರೆ. ಈಗ ಬೀದಿಗೆ ಬಿದ್ದಿರುವ ಸಾರಿಕಾ ಅವರ ನೆರವಿಗೆ ಬಂದಿರೋದು ಅಮೀರ್ ಖಾನ್.
ವೈದ್ಯ ವಿಕ್ರಮ್ ಠಕ್ಕರ್ ಹಾಗೂ ಸಾರಿಕಾ ಅವರ ಜೊತೆ ಸಂಧಾನ ಮಾಡಿಸುವ ಭರವಸೆ ನೀಡಿದ್ದಾರಂತೆ ಅಮೀರ್ ಖಾನ್. ಸಾರಿಕಾ ಕೋರ್ಟ್ ಮೆಟ್ಟಿಲನ್ನೂ ಹತ್ತಿದ್ದಾರೆ. ಕಮಲ್ ಹಾಸನ್ ಅವರಿಂದ 2004ರಲ್ಲೇ ದೂರವಾಗಿದ್ದ ಸಾರಿಕಾ, ಮುಂಬೈನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.