ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಮಕ್ ಚಿತ್ರ ಪದೇ ಪದೇ ಮುಂಗಾರು ಮಳೆಯನ್ನು ನೆನಪಿಸುತ್ತಿದೆ. ಕಾಮಿಡಿ ಟೈಂ ಅವರನ್ನು ಗೋಲ್ಡರ್ ಸ್ಟಾರ್ ಮಾಡಿದ್ದೇ ಮುಂಗಾರು ಮಳೆ. ಈಗ.. 11 ವರ್ಷಗಳ ನಂತರ ಮತ್ತೆ ಮತ್ತೆ ಮುಂಗಾರು ಮಳೆ ನೆನಪಾಗೋಕೆ ಕಾರಣವೂ ಇದೆ.
ಮುಂಗಾರು ಮಳೆ ರಿಲೀಸ್ ಆಗಿದ್ದು 2006ರ ಡಿಸೆಂಬರ್ 29ರಂದು. ಈಗ 11 ವರ್ಷಗಳ ನಂತರ ಚಮಕ್ ರಿಲೀಸ್ ಆಗುತ್ತಿರುವುದು ಕೂಡಾ ಡಿ.29ರಂದು. 2006ರ ಡಿಸೆಂಬರ್ ಕೂಡಾ ಶುಕ್ರವಾರವೇ ಆಗಿತ್ತು. ಈ ಬಾರಿಯೂ ಶುಕ್ರವಾರವೇ ಚಮಕ್ ರಿಲೀಸ್ ಆಗುತ್ತಿದೆ.
ಅಂದಹಾಗೆ ಮುಂಗಾರು ಮಳೆ ರಿಲೀಸ್ ಆದ ಕೆಲವೇ ದಿನಗಳಲ್ಲಿ ದುನಿಯಾ ವಿಜಯ್ ಅಭಿನಯದ ದುನಿಯಾ ರಿಲೀಸ್ ಆಗಿತ್ತು. ಈ ಬಾರಿಯೂ ಪರಿಸ್ಥಿತಿ ಹಾಗೆಯೇ ಇದೆ. ಚಮಕ್ ರಿಲೀಸ್ ಆದ ನಂತರದ ಕೆಲವೇ ದಿನಗಳಲ್ಲಿ ದುನಿಯಾ ವಿಜಿ ಅಭಿನಯದ ಕನಕ ಬಿಡುಗಡೆಯಾಗುತ್ತಿದೆ.
ಒಟ್ಟಿನಲ್ಲಿ ಗಣೇಶ್ ಚಮಕ್‍ಗೆ ಅದೃಷ್ಟ ಕಣ್ಣ ಮುಂದೆ ನರ್ತಿಸುತ್ತಿದೆ. ಚಿತ್ರದ ಟೀಸರ್, ಅವಲಕ್ಕಿ ಪವಲಕ್ಕಿ ಹಾಡು ಹಿಟ್ ಆಗಿರುವುದು ಒಂದು ಕಾರಣವಾದರೆ, ಚಮಕ್‍ಗೆ ಸುನಿ ನಿರ್ದೇಶನದ ಚಮಕ್ಕು ಬೇರೇ ಇದೆ. ಗಣೇಶ್‍ಗೆ ಚಮಕ್ ಮತ್ತೊಂದು ಮುಂಗಾರು ಮಳೆಯಾಗಲಿ. ಸುನಿಗೆ ಇನ್ನೊಂದು ಸಕ್ಸಸ್ ಸ್ಟೋರಿಯಾಗಲಿ.