ಟೈಟಲ್‍ನಿಂದಾಗಿಯೇ ಕನ್ನಡ ಚಿತ್ರರಸಿಕರಲ್ಲಿ ನಿರೀಕ್ಷೆ ಮೂಡಿಸಿರುವ ಚಿತ್ರ 3 ಗಂಟೆ 30 ದಿನ 30 ಸೆಕೆಂಡು. 3 ಗಂಟೆ 30 ದಿನ 30 ಸೆಕೆಂಡುಗಳಲ್ಲಿಯೇ ನಡೆಯುವ ಕಥೆಯೇ ಈ ಸಿನಿಮಾ. ಚಿತ್ರದಲ್ಲಿ ಯೋಧನ ಕಥೆ, ಪ್ರೀತಿಯ ಕಥೆ, ರಿಯಾಲಿಟಿ ಶೋ.. ಎಲ್ಲವೂ ಇದೆ.
ಚಿತ್ರದ ಹೀರೋ ಆರೂ ಗೌಡ. ಲಾಯರ್ ಪಾತ್ರದಲ್ಲಿ ನಟಿಸಿರುವ ಆರೂಗೌಡ, ಚಿತ್ರದಲ್ಲಿ ಲವ್ವರ್ ಬಾಯ್ ಕೂಡಾ ಹೌದು. ಕೋರ್ಟ್‍ಗೆ ಹೋಗದೆ, ಕೋರ್ಟ್‍ನ ಹೊರಗೇ ಡೀಲ್ ಮಾಡಿಸುವ ಡೀಲ್ ಮಾಸ್ಟರ್ ಪಾತ್ರ ಮಾಡುತ್ತಿರುವ ಆರೂಗೌಡ, ಅದರಿಂದಾಗಿಯೇ ಒಂದು ವಿಚಿತ್ರ ಸಮಸ್ಯೆಗೆ ಸಿಕ್ಕಬಿಡ್ತಾನೆ. ಅದರಿಂದ ಹೊರಬರಲು ಆತ ನಡೆಸುವ ಸಾಹಸವೇ ಚಿತ್ರದ ಕಥೆ.
ದೇವರಾಜ್, ಸುಧಾರಾಣಿಯಂತಹವರ ಜೊತೆ ನಟಿಸುವ ಸಲುವಾಗಿ ಭಾರಿ ತಯಾರಿ ಮಾಡಿಕೊಂಡೆ ಎಂದು ಹೆಳಿಕೊಳ್ಳುವ ಆರೂಗೌಡ ಅವರಿಗೆ ಚಿತ್ರ ವಿಭಿನ್ನ ಅನುಭವ ನೀಡಿದೆ. ಜಿ.ಕೆ. ಮಧೂಸೂದನ್ ಕಥೆ ಹೇಳುವ ಶೈಲಿಯೇ ಡಿಫರೆಂಟ್ ಎನ್ನವ ಆರೂಗೌಡ, ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.