ಧ್ರುವ ಸರ್ಜಾ ಅವರ ಭರ್ಜರಿ ಚಿತ್ರ ಭರ್ಜರಿ ಯಶಸ್ಸನ್ನೇ ಕಂಡಿದೆ. ಚಿತ್ರ ಹಿಟ್ ಎಂಬ ಸೂಚನೆ ಸಿಕ್ಕ ದಿನದಿಂದಲೂ ಚಿತ್ರತಂಡ, ಸಿನಿಮಾದ ಪ್ರತಿ ಮೈಲುಗಲ್ಲನ್ನೂ ಸಂಭ್ರಮಿಸುತ್ತಾ ಬಂದಿತ್ತು. 25 ದಿನ, 50 ದಿನ & 75ನೇ ದಿನದ ಸಂಭ್ರಮವನ್ನು ಥಿಯೇಟರುಗಳಲ್ಲಿ ಆಚರಿಸಿತ್ತು. ಧ್ರುವ ಸರ್ಜಾ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು.
ಇಂದು ಚಿತ್ರಕ್ಕೆ 100 ದಿನ. ಶತದಿನೋತ್ಸವದ ಸಂಭ್ರಮವೂ ಜೋರಾಗಿಯೇ ನಡೆಯಲಿದೆ. ಇಂದು ಧ್ರುವ ಸರ್ಜಾ ಅವರನ್ನು ಅಭಿಮಾನಿಗಳು ಮೈಸೂರು ಬ್ಯಾಂಕ್ ಸರ್ಕಲ್‍ನಿಂದ ನರ್ತಕಿ ಚಿತ್ರಮಂದಿರದವರೆಗೆ ಮೆರವಣಿಗೆಯಲ್ಲಿ ಕರೆತರಲಿದ್ದಾರೆ. ಡೊಳ್ಳುಕುಣಿತ, ವೀರಗಾಸೆ, ಕೇರಳ ಚಂಡೆ, ಕೀಲುಗೊಂಬೆ, ತಮಟೆ.. ಎಲ್ಲ ವಾದ್ಯಗಳ ಮೇಳವೂ ಇರಲಿದೆ.
ಇನ್ನು ಇಡೀ ದಿನ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ, ಹೂವಿನ ಅಭಿಷೇಕ, ಪಟಾಕಿಗಳ ಮೊರೆತ ಇರಲಿದೆ. ಧ್ರುವ ಸರ್ಜಾ ಅವರ 75 ಅಡಿ ಕಟೌಟ್‍ಗೆ ಅಭಿಷೇಕವೂ ನಡೆಯಲಿದೆ. 101 ಕೆಜಿಯ ಕೇಕ್ ಕಟ್ ಮಾಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.