ಪುನೀತ್ ರಾಜ್ಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರ ಪ್ರದರ್ಶನಕ್ಕೆ 40ನೇ ಸಿವಿಲ್ ನ್ಯಾಯಾಲಯ ತಡೆ ನೀಡಿದೆ. ಚಿತ್ರದಲ್ಲಿ ವಕೀಲರ ವಿರುದ್ಧ ಅವಹೇಳನಕಾರಿ ಡೈಲಾಗ್ ಇದೆ ಎಂಬ ಹಿನ್ನೆಲೆಯಲ್ಲಿ ನ್ಯಾಯಾಲಯ ಚಿತ್ರಪ್ರದರ್ಶನಕ್ಕೆ ತಡೆ ನೀಡಿದೆ.
ಜ.2ರವರೆಗೆ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಮಾಡದಂತೆ ನ್ಯಾಯಾಲಯ ಸೂಚಿಸಿದೆ. ವಿಜಯ್ ಕುಮಾರ್, ನಾರಾಯಣ ಸ್ವಾಮಿ, ನಾಗೇಶ್ ವಿನೋದ್ ಕುಮಾರ್ & ನವೀನ್ ಕುಮಾರ್ ಎಂಬ ವಕೀಲು ಚಿತ್ರದ ಈ ಡೈಲಾಗ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.
ಆದರೆ ಚಿತ್ರ ಪ್ರದರ್ಶನ ನಿಲ್ಲಿಸಲ್ಲ. ಕೋರ್ಟ್ ಆದೇಶದ ಬಗ್ಗೆ ನಮಗೆ ಗೊತ್ತಿಲ್ಲ ಎಂದಿದ್ದಾರೆ ಚಿತ್ರ ವಿತರಕ ಜಾಕ್ ಮಂಜು.
ಸೆನ್ಸಾರ್ ಆದ ಚಿತ್ರವೊಂದಕ್ಕೆ ಈ ರೀತಿ ನ್ಯಾಯಾಲಯ ತಡೆ ಕೊಡುವುದು ಸಾಧ್ಯವೇ..? ಒಮ್ಮೆ ನಾವು ಇತ್ತೀಚಿನ ತಮಿಳು ಸಿನಿಮಾ ಮರ್ಸೆಲ್ ಚಿತ್ರದ ಕುರಿತು ಮದ್ರಾಸ್ ಹೈಕೋರ್ಟ್ ಹೇಳಿದ್ದನ್ನೂ ನೆನಪಿಸಿಕೊಳ್ಳಬೇಕು. ಮರ್ಸೆಲ್ ಚಿತ್ರದ ಪ್ರದರ್ಶನಕ್ಕೂ ಇದೇ ರೀತಿ ತಡೆ ಕೋಡಿ ಬಿಜೆಪಿ ಮುಖಂಡರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಚಿತ್ರದಲ್ಲಿನ ಜಿಎಸ್ಟಿ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಕುರಿತ ಡೈಲಾಗ್ ಪ್ರಶ್ನಿಸಿ ತಡೆ ಕೊಡಲು ಕೋರಿದ್ದರು.
ಆಗ ಅರ್ಜಿಯ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್, ಮರ್ಸೆಲ್ ಸಿನಿಮಾನೇ ಹೊರತು, ನಿಜ ಜೀವನ ಅಲ್ಲ. ಇದು ಪ್ರಜಾಪ್ರಭುತ್ವ. ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಎಲ್ಲರಿಗೂ ಅನ್ವಯಿಸುವಂತೆ ಸಿನಿಮಾಗೂ ಅನ್ವಯವಾಗುತ್ತೆ ಎಂದು ಹೇಳಿತ್ತು. ಅರ್ಜಿಯನ್ನು ತಿರಸ್ಕರಿಸಿತ್ತು.
ಈಗ ಅಂಜನಿಪುತ್ರ ಚಿತ್ರದಲ್ಲೂ ಇದೇ ವಾದ ಅನ್ವಯವಾಗುತ್ತಾ..? ನೋಡಬೇಕು.