` ಬ್ರೇಕು ಸಿಕ್ಕ ತಕ್ಷಣ ರಶ್ಮಿಕಾ-ರಕ್ಷಿತ್ ಜೋಡಿ ಅಲೆಲೆಲೆಲೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rashmika rakshit city rounds
Rakshit Shetty,Rashmika image

ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಜೋಡಿ, ಸದ್ಯಕ್ಕೆ ಕನ್ನಡದ ಹಾಟ್ ಜೋಡಿ. ಎಂಗೇಜ್‍ಮೆಂಟ್ ಆಗಿದ್ದರೂ, ಕೆಲಸದ ಒತ್ತಡಗಳಿಂದಾಗಿ ಇಬ್ಬರೂ ಬ್ಲಾಕ್ & ವೈಟ್ ಕನಸುಗಳಿಗಷ್ಟೇ ಸೀಮಿತವಾಗಿದ್ದರು. ಅವರ ಬ್ಲಾಕ್ & ವೈಟ್ ಕನಸು ಬಣ್ಣವಾಗಿದ್ದು ಅಂಜನಿಪುತ್ರದ ಪ್ರೆಸ್‍ಮೀಟ್ ದಿನ.

ರಶ್ಮಿಕಾ, ಹೈದರಾಬಾದ್, ಬೆಂಗಳೂರು ಎಂದು ಓಡಾಡುತ್ತಿದ್ದರೆ, ಇತ್ತ ರಕ್ಷಿತ್ ಶೆಟ್ಟಿ, ಸಿನಿಮಾ, ಸ್ಕ್ರಿಪ್ಟು, ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ. ಇದರ ಮಧ್ಯೆ ಪ್ಲಾನ್ ಮಾಡಿ ಒಂದಿಡೀ ದಿನ ಒಟ್ಟಿಗೇ ಸುತ್ತವ ಪ್ಲಾನ್ ಮಾಡಿದ್ದಾರೆ. ಬೆಂಗಳೂರು ಸುತ್ತೋಕೆ ಕಾರ್‍ಗಿಂತ ಬೈಕೇ ಬೆಸ್ಟು ಎಂದುಕೊಂಡ ರಕ್ಷಿತ್, ಬೈಕ್‍ನಲ್ಲಿಯೇ ಸುತ್ತಾಡಿದ್ದಾರೆ. ಅವರ ಅಂದ, ಅದೃಷ್ಟವನ್ನೂ ಹಿಂದಿನ ಸೀಟ್‍ನಲ್ಲಿ ಕೂರಿಸಿಕೊಂಡು.

ಬೈಕ್ ಎಂದರೆ ಭಯ ಬೀಳುವ ರಶ್ಮಿಕಾ, ರಕ್ಷಿತ್ ಧೈರ್ಯದ ಮೇಲೆ ಸುತ್ತಾಡಿದ್ದಾರೆ. ಹೆಲ್ಮೆಟ್ ಹಾಕಿಕೊಂಡರೆ ಯಾರಿಗೂ ಗುರುತು ಸಿಕ್ಕೋದಿಲ್ಲ ಎಂದುಕೊಂಡಿದ್ದರಂತೆ. ಇದರ ಮಧ್ಯೆಯೂ ಅಭಿಮಾನಿಯೊಬ್ಬ ಫೋಟೋ ತೆಗೆದು, ಆ ಫೋಟೋ ವೈರಲ್ ಆಗಿಬಿಟ್ಟಿದೆ.