ಸತ್ಯಜಿತ್. ಕನ್ನಡ ಚಿತ್ರರಂಗದ ಮಹಾನ್ ಪ್ರತಿಭೆ. ಇತ್ತೀಚೆಗೆ ಗ್ಯಾಂಗ್ರಿನ್ನಿಂದ ಕಾಲು ಕಳೆದುಕೊಂಡಿದ್ದ ಸತ್ಯಜಿತ್, ಈಗ ಮತ್ತೆ ಬಣ್ಣ ಹಚ್ಚಿದ್ದಾರೆ. ದಿ.ಮಂಜುನಾಥನ ಗೆಳೆಯರು ಸತ್ಯಜಿತ್ ಅಭಿನಯಿಸುತ್ತಿರುವ ಹೊಸ ಸಿನಿಮಾ. ಪೊಲೀಸ್ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸತ್ಯಜಿತ್, ಮತ್ತೊಮ್ಮೆ ತಮ್ಮ ಖಡಕ್ ಅಭಿನಯ ಮೆರೆಯಲಿದ್ದಾರೆ ಎನ್ನುವುದೇ ಚಿತ್ರರಸಿಕರಿಗೆ ಸಂತಸದ ಸುದ್ದಿ.
ಅರುಣ್ ಎಂಬುವವರು ನಿರ್ದೇಶಿಸುತ್ತಿರುವ ಚಿತ್ರದಲ್ಲಿ, ಸತ್ಯಜಿತ್ ಅವರ ಈಗಿನ ಪರಿಸ್ಥಿತಿಗೆ ಅನುಕೂಲವಾಗುವಂತೆಯೇ ದೃಶ್ಯಗಳನ್ನು ಹೆಣೆಯಲಾಗಿದೆಯಂತೆ. ಐವರು ಎಂಜಿನಿಯರ್ ವಿದ್ಯಾರ್ಥಿಗಳ ಬದುಕೇ ಚಿತ್ರದ ಕಥೆ. ಬಹುತೇಕ ಹೊಸಬರೇ ಇರುವ ಚಿತ್ರಕ್ಕೆ ಅರುಣ್ ಎಸ್.ಡಿ. ನಿರ್ಮಾಪಕರು.
ಸತ್ಯಜಿತ್ ಅವರ ಮತ್ತೊಂದು ಬಣ್ಣ ಬದುಕಿಗೆ ಶುಭವಾಗಲಿ.
Related Articles :-