ಶರ್ಮಿಳಾ ಮಾಂಡ್ರೆ ಎಂಬ ಕಣ್ ಕಣ್ಣ ಸಲಿಗೆಯ ಸುಂದರಿ ಈಗ ನಿರ್ಮಾಪಕಿಯಾಗಲು ಹೊರಟಿದ್ದಾರೆ. ಇದುವರೆಗೆ ನಟನೆಯಲ್ಲಷ್ಟೇ ಬ್ಯುಸಿಯಾಗಿದ್ದ ಶರ್ಮಿಳಾ, ಇನ್ನು ಮುಂದೆ ಹೊಸಬರ ಚಿತ್ರಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಶರ್ಮಿಳಾ ಮಾಂಡ್ರೆ ಪ್ರೊಡಕ್ಷನ್ಸ್ ಹೌಸ್ ಆರಂಭ ಮಾಡಿದ್ದಾರೆ ಶರ್ಮಿಳಾ ಮಾಂಡ್ರೆ.
ಶರ್ಮಿಳಾ ಅವರ ಕುಟುಂಬಕ್ಕೆ ಚಿತ್ರ ನಿರ್ಮಾಣ ಹೊಸದೇನಲ್ಲ. ಅವರ ತಂದೆ ದಯಾನಂದ್, ತಾತ, ಮಾವ.. ಎಲ್ಲರೂ ಚಿತ್ರ ನಿರ್ಮಾಣ, ವಿತರಣೆಯಲ್ಲಿ ತೊಡಗಿಕೊಂಡಿದ್ದವರೇ. ಈ ಅನುಭವ ಶರ್ಮಿಳಾ ಮಾಂಡ್ರೆ ನೆರವಿಗೆ ಬರಲಿದೆ.
ಸದ್ಯಕ್ಕೆ ಬಾಲಿವುಡ್ನ ಕಥಾ ಚಿತ್ರದಲ್ಲಿ ಬ್ಯುಸಿಯಾಗಿರುವ ಶರ್ಮಿಳಾ ಯಾವ ಭಾಷೆಯಲ್ಲಿ ಮೊದಲ ಚಿತ್ರ ನಿರ್ಮಾಣ ಮಾಡುತ್ತಾರೆ ಎನ್ನುವುದು ಸದ್ಯದ ಕುತೂಹಲ.