ಹಂಬಲ್ ಪೊಲಿಟಿಷಿಯನ್ ನೊಗರಾಜ್. ಇದು ಚಿತ್ರದ ಹೆಸರು. ನೊಗರಾಜ್ ಅಥವಾ ನೋಗರಾಜ್ ಅಥವಾ ನಾಗರಾಜ್... ಹೀಗೆ ಮೂರೂ ಸ್ಟೈಲಲ್ಲಿ ಜನ ಚಿತ್ರದ ಹೆಸರು ಹೇಳುತ್ತಿದ್ದಾರೆ. ಚಿತ್ರವೊಂದು ಅಷ್ಟರಮಟ್ಟಿಗೆ ಕ್ರಿಯೇಟಿವಿಟಿ ಸೃಷ್ಟಿಸುವುದರಲ್ಲೇ ಚಿತ್ರದ ಯಶಸ್ಸು ಕೂಡಾ ಅಡಗಿದೆ. ಚಿತ್ರ ಬಿಡುಗಡೆಗೆ ಮುನ್ನವೇ ಪ್ರೇಕ್ಷಕರ ಮಧ್ಯೆ ಟಾಕಿಂಗ್ ಸೃಷ್ಟಿಸಿದೆ.
ಈ ಚಿತ್ರದಲ್ಲಿರೋದು ರಾಜಕಾರಣಿಯ ಪಾತ್ರ. ರಾಜಕಾರಣಕ್ಕಾಗಿ, ರಾಜಕಾರಣಿಯೊಬ್ಬ ಏನೇನೆಲ್ಲ ಗಿಮಿಕ್ ಮಾಡಬಹುದೋ.. ಎಲ್ಲವನ್ನೂ ಚಿತ್ರದಲ್ಲಿ ಹೇಳಲಾಗಿದೆ. ದಾನೀಶ್ ಇರೋದ್ರಿಂದ ವ್ಯಂಗ್ಯ, ವಿಡಂಬನೆ ಸ್ವಲ್ಪ ಹೆಚ್ಚೆಂದೇ ಹೇಳಬಹುದು. ನೋಡುವಾಗ ಮುಗುಳ್ನಕ್ಕವರು, ಮತ್ತೆ ಮತ್ತೆ ನೆನಪಾದಾಗ ಗಹಗಹಿಸಿ ನಗುವಂತಾ ದೃಶ್ಯಗಳಿವೆಯಂತೆ.
ಮಹಿಳೆಯರೇ.. ಮಹನೀಯರೇ.. ಪ್ರೇಕ್ಷಕರೇ.. ನೋಗರಾಜ್‍ಗೆ ಮತ ನೀಡಿ. ಡಿಸೆಂಬರ್ 29ಕ್ಕೆ ಬರ್ತಾರೆ. ಕರ್ನಾಟಕದ ಎಲೆಕ್ಷನ್‍ವರೆಗೂ ಕಾಯಿಸಲ್ಲ. ಸಿನಿಮಾ ನೋಡಿ, ನಮ್ಮ ರಾಜಕಾರಣಿಗಳು ಹೇಗೆಲ್ಲ ಗಿಮಿಕ್ ಮಾಡ್ತಾರೆ ಅನ್ನೊದನ್ನ ನೀವೇ ಅಂದಾಜು ಮಾಡಿ. ದಾನೀಶ್ ಜೊತೆ ಶೃತಿ ಹರಿಹರನ್ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾದಲ್ಲಿಗುಜರಾತ್, ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಕಾಣಿಸಿಕೊಂಡ ಗಿಮಿಕ್‍ಗಳೂ ಇವೆ.