` 30 ಸೆಕೆಂಡ್ ಪತ್ರಕರ್ತೆಗೆ ಅರ್ನಾಬ್ ಸ್ಫೂರ್ತಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
arnab goswami is an inspiration
Arnab Goswami, Kavya Shetty Image

30 ಗಂಟೆ, 30 ದಿನ, 30 ಸೆಕೆಂಡ್. ಇಂಥಾದ್ದೊಂದು ವಿಭಿನ್ನ ಹೆಸರಿನ ಸಿನಿಮಾದಲ್ಲಿ ಕಾವ್ಯಾಶೆಟ್ಟಿಯದ್ದು ಜರ್ನಲಿಸ್ಟ್ ಪಾತ್ರ. ಇಡೀ ಚಿತ್ರವನ್ನು ಟೇಕಾಫ್ ಮಾಡುವುದೇ ಜರ್ನಲಿಸ್ಟ್ ಕಾವ್ಯಾಶೆಟ್ಟಿ. ಅದರಲ್ಲೂ ರೆಬಲ್ ಜರ್ನಲಿಸ್ಟ್.

ಈ ಜರ್ನಲಿಸ್ಟ್ ಪಾತ್ರ ಹೇಗಿರಬೇಕು ಎಂದುಕೊಂಡಾಗ, ನೆನಪಿಗೆ ಬಂದಿದ್ದೇ ಅರ್ನಾಬ್ ಗೋಸ್ವಾಮಿಯಂತೆ. ಇಂಗ್ಲಿಷ್ ನ್ಯೂಸ್ ಚಾನೆಲ್ ನೊಡುವವರಿಗೆ ಅರ್ನಾಬ್ ಗೋಸ್ವಾಮಿ ಚಿರಪರಿಚಿತ ಹೆಸರು. ಹಿಂದೆ ಟೈಮ್ಸ್ ನೌನಲ್ಲಿದ್ದ, ಈಗ ರಿಪಬ್ಲಿಕ್ ಟಿವಿ ಸಂಪಾದಕರಾಗಿರುವ ಅರ್ನಾಬ್, ನ್ಯೂಸ್ ಚಾನೆಲ್‍ಗಳ ರೆಬಲ್‍ಸ್ಟಾರ್ ಎಂದರೆ ತಪ್ಪಾಗಲಿಕ್ಕಿಲ್ಲ.

ಜೋರು ಗಂಟಲಿನಲ್ಲಿ ವಾದ ಮಾಡುವ ಅರ್ನಾಬ್‍ರನ್ನು ಮನಸ್ಸಿನಲ್ಲಿಟ್ಟುಕೊಂಡೇ ಕಾವ್ಯಾಶೆಟ್ಟಿ ಪಾತ್ರವನ್ನು ರೂಪಿಸಿದರಂತೆ ನಿರ್ದೇಶಕ ಮಧುಸೂದನ್. ಚಿತ್ರದ ನಾಯಕ ಲಾಯರ್. ಮೊಂಡುವಾದಿ. ಅವನನ್ನು ಕಟ್ಟಿಹಾಕುವುದು ರೆಬಲ್‍ಸ್ಟಾರ್ ಜರ್ನಲಿಸ್ಟ್.

ಹೀಗೆ ಚಿತ್ರದಲ್ಲಿ ಲಾಯರ್ ಮತ್ತು ಜರ್ನಲಿಸ್ಟ್ ವಾರ್ ಶುರುವಾಗುತ್ತೆ. ಚಿತ್ರ ಟೇಕಾಫ್ ಆಗುವುದೇ ಅಲ್ಲಿಂದ. ಯಾವುದಕ್ಕೂ ಒಂದ್ಸಲ.. 30 ಸೆಕೆಂಡ್.. 30 ನಿಮಿಷ ಬಿಡುವು ಮಾಡಿಕೊಳ್ಳಿ. 

Shivarjun Movie Gallery

Actor Bullet Prakash Movie Gallery