ಸನ್ನಿ ಲಿಯೋನ್, ಬೆಂಗಳೂರಿನಲ್ಲಿ ನಡೆಯಬೇಕಿದ್ದ ಸನ್ನಿ ನೈಟ್ಸ್‍ಗೆ ಬರ್ತಾರಾ..? ಬರಲ್ವಾ.. ಇಂಥಾದ್ದೊಂದು ಅನುಮಾನ ಇದುವರೆಗೂ ಇದ್ದೇ ಇತ್ತು. ಈಗ ಸ್ವತಃ ಸನ್ನಿಲಿಯೋನ್ ಅವರೇ ಸ್ಪಷ್ಟಪಡಿಸಿಬಿಟ್ಟಿದ್ದಾರೆ. ನಾನು ಬೆಂಗಳೂರಿಗೆ ಬರೋದಿಲ್ಲ ಎಂದು ಹೇಳಿಯೂಬಿಟ್ಟಿದ್ದಾರೆ.
ನನಗೆ & ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸುವ ಎಲ್ಲರಿಗೂ ಭದ್ರತೆ ಒದಗಿಸಲು ಸಾಧ್ಯವಿಲ್ಲ ಎಂದು ಬೆಂಗಳೂರು ಪೊಲೀಸರು ಸಾರ್ವಜನಿಕವಾಗಿ ಹೇಳಿದ್ದಾರೆ. ನನಗೆ ಮತ್ತು ನನ್ನ ತಂಡಕ್ಕೆ ಸಾರ್ವಜನಿಕರ ಸುರಕ್ಷತೆಯೇ ಮುಖ್ಯ. ಹೀಗಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸೋದಿಲ್ಲ. ಎಲ್ಲರೂ ಸುರಕ್ಷಿತವಾಗಿ ಹೊಸ ವರ್ಷ ಆಚರಿಸಿ. ದೇವರು ಒಳ್ಳೆಯದು ಮಾಡಲಿ.
ಕೇವಲ ಇಷ್ಟು ಹೇಳಿ ಸನ್ನಿ ಸುಮ್ಮನಾಗಿಲ್ಲ. ಯುವಕರಿಗೆ ಕರೆಯೊಂದನ್ನು ನೀಡಿರುವ ಸನ್ನಿ, ನಿಮಗಾಗಿ ನೀವೇ ಧ್ವನಿಯೆತ್ತಿ. ನಿಮ್ಮ ಮಾತನ್ನು ಇನ್ಯಾರೋ ಆಡುವ ರೀತಿ ನೋಡಿಕೊಳ್ಳಬೇಡಿ ಎಂದೂ ಹೇಳಿದ್ದಾರೆ.
ಈಗ ಕಾರ್ಯಕ್ರಮದ ಆಯೋಜಕರು, ತಮಗೆ ನಷ್ಟ ಭರಿಸಿಕೊಡುವಂತೆ ಕೋರ್ಟ್ ಮೊರೆ ಹೋಗಿದ್ದಾರೆ.