ಭಗವಾನ್. ಡಾ.ರಾಜ್ ಕುಮಾರ್, ಅನಂತ್‍ನಾಗ್, ವಿಷ್ಣುವರ್ಧನ್‍ರಂತಹ ಮಹಾನ್ ಕಲಾವಿದರ ಚಿತ್ರಗಳನ್ನು ನಿರ್ದೇಶಿಸಿದ ಡೈರೆಕ್ಟರ್. ಅವರಿಗೀಗ 85. ಈ ವಯಸ್ಸಿನಲ್ಲಿ ಮತ್ತೆ ನಿರ್ದೇಶನದ ಅಖಾಡಕ್ಕಿಳಿದಿರುವ ಭಗವಾನ್, `ಆಡುಗ ಗೊಂಬೆ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಸ್ತೂರಿ ನಿವಾಸ, ರಾಜಕುಮಾರ ಚಿತ್ರದಲ್ಲಿ ಮ್ಯಾಜಿಕ್ ಮಾಡಿದ್ದ ಗೊಂಬೆ, ಈ ಚಿತ್ರದಲ್ಲೂ ಇರಲಿದೆ.
ಆದರೆ, ಇದೆಲ್ಲಕ್ಕಿಂತ ಇಡೀ ಚಿತ್ರತಂಡ ಬೆರಗಾಗಿರುವುದು 85ರ ಹರೆಯದ ಭಗವಾನ್ ಸಾಹಸಕ್ಕೆ. ಏರ್‍ಪೋರ್ಟ್ ರಸ್ತೆಯಲ್ಲಿ ಕಾರ್‍ನ್ನು ಓಡಿಸುತ್ತಲೇ ಕ್ಯಾಮೆರಾಮನ್‍ಗೆ ನಿರ್ದೇಶನ ನೀಡುತ್ತಾ, ಕಲಾವಿದರಿಂದ ತಮಗೆ ಬೇಕಾದ ಶಾಟ್ಸ್ ತೆಗೆಸಿದ ಉತ್ಸಾಹಕ್ಕೆ. ಅದನ್ನು ನೋಡಿ ಚಿತ್ರದ ನಾಯಕ ಸಂಚಾರಿ ವಿಜಯ್ ದಂಗಾಗಿಬಿಟ್ಟಿದ್ದಾರೆ.
ಡ್ರೈವ್ ಮಾಡುತ್ತಿದ್ದ ಭಗವಾನ್, ಮಿರರ್‍ನಲ್ಲಿ ನಮ್ಮ ನಟನೆಯನ್ನು ನೋಡಿ, ಎಕ್ಸ್‍ಪ್ರೆಷನ್ಸ್ ಹೇಗೆ ಬರಬೇಕೆಂದು ಹೇಳುತ್ತಿದ್ದರು. ಕ್ಯಾಮೆರಾಮನ್‍ಗೂ ಸಲಹೆ ಕೊಡುತ್ತಿದ್ದರು. ಇದೆಲ್ಲವನ್ನೂ ಡ್ರೈವ್ ಮಾಡಿಕೊಂಡೇ ಮಾಡಿದ ಭಗವಾನ್, ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ್ದು ಇದೇ ಕಾರಣಕ್ಕಿರಬೇಕು.