ಜೋಗಿ ಪ್ರೇಮ್ ಮತ್ತು ದರ್ಶನ್, ಇಬ್ಬರೂ ಜೊತೆಯಾಗಿ ಕೆಲಸ ಮಾಡಿದವರೇ. ದರ್ಶನ್ ಅಭಿನಯದ ಕರಿಯ ಚಿತ್ರ, ಪ್ರೇಮ್ ನಿರ್ದೇಶನದ ಮೊದಲ ಚಿತ್ರ. ಆ ಸಿನಿಮಾ ದರ್ಶನ್‍ಗೆ ದೊಡ್ಡ ಇಮೇಜ್ ನೀಡಿದ ಚಿತ್ರವೂ ಹೌದು. ಇವರಿಬ್ಬರೂ ಈಗ ಮತ್ತೆ ಒಟ್ಟಾಗುತ್ತಿದ್ದಾರಂತೆ.
ಶೈಲಜಾ ನಾಗ್ ನಿರ್ಮಾಣದ ಚಿತ್ರ ಮುಗಿದ ನಂತರ ಪ್ರೇಮ್ & ದರ್ಶನ್ ಜೋಡಿಯ ಚಿತ್ರ ಸೆಟ್ಟೇರುವ ಸಾಧ್ಯತೆಗಳಿವೆ. ತಾರಕ್ ಚಿತ್ರದ ನಂತರ 65 ದಿನಕ್ಕಿಂತ ಹೆಚ್ಚಿಗೆ ಯಾರಿಗೂ ಕಾಲ್‍ಶೀಟ್ ಕೊಡಲ್ಲ ಎಂದು ಪ್ರತಿಜ್ಞೆ ಮಾಡಿದ್ದ ದರ್ಶನ್, ಪ್ರೇಮ್‍ಗಾಗಿ ಆ ಪ್ರತಿಜ್ಞೆಯನ್ನೂ ಮುರಿದಿದ್ದಾರೆ. 85 ದಿನಗಳ ಕಾಲ್‍ಶೀಟ್ ಕೊಟ್ಟಿದ್ದಾರಂತೆ.
ಪ್ರೇಮ್-ದರ್ಶನ್ ಜೋಡಿಯ ಚಿತ್ರಕ್ಕೆ ನಿರ್ಮಾಪಕರಾಗುತ್ತಿರುವುದು ಹೆಬ್ಬುಲಿ ಉಮಾಪತಿ. ಸದ್ಯಕ್ಕೆ ದಿ ವಿಲನ್ ಬ್ಯುಸಿಯಲ್ಲಿರುವ ಪ್ರೇಮ್, ಆ ನಂತರ ಈ ಮೆಗಾ ಚಿತ್ರಕ್ಕೆ ಸಿದ್ಧವಾಗಲಿದ್ದಾರೆ.