ಸುದೀಪ್, ರಾಗಿಣಿ ದ್ವಿವೇದಿ.. ಮತ್ತೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗೆ ನೋಡಿದರೆ, ರಾಗಿಣಿ ದ್ವಿವೇದಿ ಅವರು ನಟಿಸಿದ ಮೊದಲ ಚಿತ್ರ ಕೆಂಪೇಗೌಡ ಎಂದೇ ಹೇಳಬೇಕು. ಕೆಂಪೇಗೌಡ, ವೀರ ಮದಕರಿ ಚಿತ್ರಗಳಲ್ಲಿ ಒಟ್ಟಿಗೇ ನಟಿಸಿದ್ದ ಸುದೀಪ್-ರಾಗಿಣಿ ಜೋಡಿ ಮತ್ತೆ ತೆರೆಯ ಮೇಲೆ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಈಗ ಆ ಕಾಲ ಸನ್ನಿಹಿತವಾಗಿದೆ.
`ಕಿಚ್ಚು' ಚಿತ್ರದಲ್ಲಿ ರಾಗಿಣಿ ನಾಯಕಿ. ಆ ಚಿತ್ರದಲ್ಲಿ ಅತಿಥಿ ನಟರಾಗಿ ನಟಿಸುತ್ತಿದ್ದಾರೆ ಕಿಚ್ಚ ಸುದೀಪ್. ಇತ್ತೀಚೆಗೆ ನಿಧನರಾದ ಧ್ರುವ ಚಿತ್ರದ ನಾಯಕ. ಪ್ರದೀಪ್ ರಾಜ್ ನಿರ್ದೇಶನದ ಚಿತ್ರದಲ್ಲಿ ರಾಗಿಣಿ ಗ್ಲ್ಯಾಮರ್ ಇಲ್ಲದ ರೋಲ್‍ನಲ್ಲಿ ನಟಿಸುತ್ತಿದ್ದಾರೆ.
ಸಿನಿಮಾದಲ್ಲಿ ಇಬ್ಬರೂ ಮುಖಾಮುಖಿಯಾಗುತ್ತಾರಾ..? ಇದು ಅಭಿಮಾನಿಗಳ ನಿರೀಕ್ಷೆ. ಹಿಟ್ ಜೋಡಿಯನ್ನು ಮತ್ತೊಮ್ಮೆ ತೆರೆಯ ಮೇಲೆ ನೋಡುವ ಆಸೆ ಅಭಿಮಾನಿಗಳಿಗೂ ಇದೆ.