` ಹೊಂಬಾಳೆ ಬ್ಯಾನರ್‍ನಲ್ಲಿ ಶ್ರೀಮುರಳಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
srimurali's next with hombale films
SriMurali Image

ಉಗ್ರಂ ನಂತರ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರುವ ಶ್ರೀಮುರಳಿ, ಈಗ ಹೊಂಬಾಳೆ ಬ್ಯಾನರ್ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ರಾಜಕುಮಾರ, ಕೆಜಿಎಫ್‍ನಂತ ದೊಡ್ಡ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಪ್ರೊಡಕ್ಷನ್ಸ್, ಶ್ರೀಮುರಳಿಗಾಗಿ ಸಿನಿಮಾ ನಿರ್ಮಿಸಲಿದೆ. 

ಚಿತ್ರಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿರುವುದು ಬಂಗಾರ ಸ/ಒ ಬಂಗಾರದ ಮನುಷ್ಯ ಚಿತ್ರ ನಿರ್ದೇಶಿಸಿದ್ದ ಯೋಗಿ ಜಿ.ರಾಜ್. ಉಗ್ರಂ, ರಥಾವರ ಹಾಗೂ ಈಗ ಮಫ್ತಿ ಚಿತ್ರದ ಯಶಸ್ಸಿನ ಅಲೆಯಲ್ಲಿರುವ ಶ್ರೀಮುರಳಿಗೆ ಈಗ ದೊಡ್ಡ ಬ್ಯಾನರ್‍ನಿಂದ ಆಫರ್ ಸಿಕ್ಕಿದೆ. 

ಸದ್ಯಕ್ಕೆ ಫೈನಲ್ ಆಗಿರುವುದು ಹೀರೋ & ನಿರ್ದೇಶಕ ಮಾತ್ರ. ಉಳಿದ ತಂತ್ರಜ್ಞರು, ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ.

Johnny Johnny Yes Papa Movie Gallery

Rightbanner02_statement_inside

Dalapathi Movie Gallery