` ಕತ್ತಿವರಸೆ ಕಲಿತು ಮಹಾರಾಣಿಯಾದರು ಸಂಜನಾ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sanjana becomes warrior queen
Sanjana Image

ಸಂಜನಾ ಎಂದರೆ, ಇಂದಿಗೂ ಕನ್ನಡಿಗರ ಕಣ್ಮುಂದೆ ಬರುವುದು ಗ್ಲ್ಯಾಮರಸ್ ಸಂಜನಾ. ಅದಕ್ಕೆ ತಕ್ಕಂತೆ ಅವರಿಗೆ ಸಿಕ್ಕಿದ್ದೆಲ್ಲವೂ ಅಂಥದ್ದೇ ಪಾತ್ರಗಳು. ಮಧ್ಯೆ ಮಧ್ಯೆ ಬೇರೆ ಬಗೆಯ ಪಾತ್ರಗಳಿಗೆ ಶ್ರಮ ಹಾಕಿದರಾದರೂ, ಗೆಲುವು ಸಿಕ್ಕಲಿಲ್ಲ. ಈಗ ಸಂಜನಾಗೆ ತಮ್ಮ ಈ ಹಿಂದಿನ ಎಲ್ಲ ಗ್ಲ್ಯಾಮರಸ್ ರೋಲ್‍ಗಳಿಗೆ ತದ್ವಿರುದ್ಧವಾದ ಪಾತ್ರವೊಂದು ಸಿಕ್ಕಿದೆ.

ಅಂದಹಾಗೆ ಸಂಜನಾ ಈಗ ಮಹಾರಾಣಿಯಾಗಿದ್ದಾರೆ. ಸಿನಿಮಾದಲ್ಲಿ ಅಲ್ಲ, ಕಿರುತೆರೆಯಲ್ಲಿ. ತೆಲುಗಿನಲ್ಲಿ ತಯಾರಾಗುತ್ತಿರುವ `ಸ್ವರ್ಣ ಖಡ್ಗಂ' ಟಿವಿ ಶೋದಲ್ಲಿ ಸಂಜನಾ ಮಹಾರಾಣಿ. ಆ ಪಾತ್ರಕ್ಕಾಗಿ ಕತ್ತಿ ವರಸೆ, ಕುದುರೆ ಸವಾರಿ ಕಲಿತಿರುವ ಸಂಜನಾ, ಈ ಶೋ ತಮಗೆ ಇಂಡಿಯಾ ಲೆವೆಲ್‍ನಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಲಿದೆ ಎಂಬ ಭರವಸೆಯಲ್ಲಿದ್ದಾರೆ.

ಟಿವಿ ಶೋ ಸುಮಾರು 500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಬಂಡವಾಳ ಹೂಡಿರುವುದು ಬಾಹುಬಲಿಯ ನಿರ್ಮಾಪಕರಲ್ಲಿ ಒಬ್ಬರಾದ ಪ್ರಸಾದ್ ದೇವಿನೇನಿ. ಒಬ್ಬ ಅಪ್ಪಟ ಯೋಧೆಯ ಪಾತ್ರದ ಮೂಲಕ ಕಿರುತೆರೆಗೆ ಕಾಲಿಡುತ್ತಿರುವ ಸಂಜನಾ, ಟಿವಿ ಶೋ ಬಗ್ಗೆ ದೊಡ್ಡ ಕನಸು ಇಟ್ಟುಕೊಂಡಿದ್ದಾರೆ. ಏಕೆಂದರೆ ಈ ಶೋ ಭಾರತದ 12 ಭಾಷೆಗಳಲ್ಲಿ ಪ್ರಸಾರವಾಗಲಿದೆ.

Johnny Johnny Yes Papa Movie Gallery

Rightbanner02_statement_inside

Dalapathi Movie Gallery