ಟೋರಾ ಟೋರಾ ಎಂದರೆ ಏನು..? ಟೋರಾ ಟೋರಾ ಎಂದರೆ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಬರುವ ಸರ್ಕಸ್ ಮಾದರಿಯ ಒಂದು ಆಟ. ಟೋರಾ ಎಂದರೆ, ಯೆಹೂದಿಗಳ ಪವಿತ್ರ ಗ್ರಂಥದ ಹೆಸರು. ಆದರೆ ಇದು ಅದ್ಯಾವುದೂ ಅಲ್ಲ. ಇದು ಟೈಂ ಜೊತೆ ಓಡುವ ಸೈಂಟಿಫಿಕ್ ಥ್ರಿಲ್ಲರ್ ಸಿನಿಮಾ.
ಹಾಲಿವುಡ್ನಲ್ಲಿ ಇಂತಹ ಕಾನ್ಸೆಪ್ಟ್ಗಳು ಹಲವಾರು ಬಂದಿವೆ. ತಮಿಳು, ಹಿಂದಿಯಲ್ಲೂ ಇಂಥ ಪ್ರಯೋಗಗಳಾಗಿವೆ. ಆದರೆ, ಇದು ಕನ್ನಡಕ್ಕೆ ಹೊಸತು.
ಹರ್ಷ ಗೌಡ ನಿದೇಶಿಸಿರುವ ಚಿತ್ರಕ್ಕೆ ಅವರೂ ಸೇರಿದಂತೆ ಅವರ ಗೆಳೆಯರೇ ನಿರ್ಮಾಪಕರು. ಒಬ್ಬ ವ್ಯಕ್ತಿ ತನ್ನದೇ ಜೀವನದ ವಿವಿಧ ಘಟ್ಟಗಳಲ್ಲಿ ಸಂಚರಿಸುವ ವಿಭಿನ್ನ ಪರಿಕಲ್ಪನೆಯ ಸಿನಿಮಾ ತೆರೆಗೆ ಬರುತ್ತಿದೆ. ಒಂದು ವಿಭಿನ್ನ ಅನುಭವ, ಪ್ರಯತ್ನವನ್ನು ಮಿಸ್ ಮಾಡಿಕೊಂಡರೆ ಹೇಗೆ..? ನೋಡೋಣಲ್ವಾ..