ಕಿಚ್ಚ ಸುದೀಪ್ ರಾಜಕೀಯಕ್ಕೆ ಬರ್ತಾರಾ..? ಇಂಥಾದ್ದೊಂದು ಪ್ರಶ್ನೆಗೆ ಸುದೀಪ್ ಖಡಾಖಂಡಿತವಾಗಿ ನೋ ಎಂದುಬಿಟ್ಟಿದ್ದಾರೆ. ರಾಜಕೀಯ ನಮ್ಮಂತಹವರಿಗಲ್ಲ ಎಂದಿದ್ದಾರೆ. ಆದರೆ, ಇಂದು ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಜೊತೆ ಸುದೀಪ್ ಭೇಟಿ ಮಾಡಿರುವುದು ತೀವ್ರ ಕುತೂಹಲ ಮೂಡಿಸಿತ್ತು. ಸಿಎಂ ಸಿದ್ದರಾಮಯ್ಯನವರ ಕಾವೇರಿ ನಿವಾಸಕ್ಕೆ ಭೇಟಿ ನೀಡಿದ ಸುದೀಪ್, ಸುಮಾರು 45 ನಿಮಿಷ ಕಾಲ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ರ.
ಈ ವೇಳೆ ವಿಷ್ಣು ಸ್ಮಾರಕ ಕುರಿತಂತೆ ಸಿದ್ದರಾಮಯ್ಯನವರಿಗೆ ಮನವಿ ಮಾಡಿರುವ ಸುದೀಪ್, ಸಮಾಧಿಯನ್ನು ಮಾತ್ರ ಸ್ಥಳಾಂತರಿಸಬೇಡಿ ಎಂದು ಮನವಿ ಮಾಡಿದ್ದಾರೆ. ಸ್ಮಾರಕವನ್ನು ಎಲ್ಲಾದರೂ ನಿರ್ಮಿಸಿ, ಸಮಾಧಿ ಸ್ಥಳ ಈಗ ಇರುವ ಜಾಗದಲ್ಲಿಯೇ ಇರಲಿ ಎಂದು ಕೇಳಿಕೊಂಡಿದ್ದಾರೆ.
ರಾಜಕೀಯದ ಬಗ್ಗೆ ಏನಾದರೂ ಮಾತನಾಡಿದಿರಾ ಎಂಬ ಪ್ರಶ್ನೆಗೆ ಸುದೀಪ್ ನೀಡಿರುವುದು ಮುಗುಳ್ನಗೆಯ ಉತ್ತರ.