ಕಿಚ್ಚ ಸುದೀಪ್ ಕೋಟಿಗೊಬ್ಬರಷ್ಟೇ ಅಲ್ಲ, ಹೃದಯವಂತರೂ ಹೌದು ಅನ್ನೋದಕ್ಕೆ ಈ ಪ್ರಕರಣ ಇನ್ನೊಂದು ಸಾಕ್ಷಿ ಅನ್ನೋಕೆ ಅಡ್ಡಿಯಿಲ್ಲ. ಬಳ್ಳಾರಿ ಮೂಲದ ವಿನುತಾ, ಸುದೀಪ್ ಅವರ ಅಪ್ಪಟ ಅಭಿಮಾನಿ. ಕ್ಯಾನ್ಸರ್ 4ನೇ ಹಂತದಲ್ಲಿರುವ ವಿನುತಾ ಅವರಿಗೆ ಒಮ್ಮೆಯಾದರೂ ಸುದೀಪ್ ಅವರನ್ನು ನೋಡಬೇಕು, ಮಾತನಾಡಿಸಬೇಕು ಎಂಬ ಆಸೆ.
ತಮ್ಮ ಅಭಿಮಾನಿ ಸಂಘ ಕಿಚ್ಚ ಸುದೀಪ್ ಸೇನಾ ಸಮಿತಿಯಿಂದ ವಿಷಯ ತಿಳಿದುಕೊಂಡ ಸುದೀಪ್, ಮನೆಗೇ ಸ್ವತಃ ತೆರಳಿ ವಿನುತಾ ಅವರನ್ನು ಭೇಟಿಯಾಗಿದ್ದಾರೆ. ಅಭಿಮಾನಿಯ ಜೊತೆ ಗಂಟೆಗೂ ಹೆಚ್ಚು ಕಾಲ ಕಳೆದು ಅಭಿಮಾನಿಯ ಅಂತಿಮ ಆಸೆ ಈಡೇರಿಸಿದ್ದಾರೆ.