ಸರ್ಜಾ ಕುಟುಂಬದಿಂದ ಮೂವರು ಹೀರೋಗಳು. ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ. ಈಗ ಅವರ ಜೊತೆಗೊಬ್ಬ ಹೀರೋಯಿನ್. ಐಶ್ವರ್ಯಾ. ಅರ್ಜುನ್ ಸರ್ಜಾರ ಮಗಳು ಐಶ್ವರ್ಯಾ ನಟಿಸುತ್ತಿರುವ ಮೊದಲ ಚಿತ್ರ ಪ್ರೇಮಬರಹ.
ಆ ಚಿತ್ರದಲ್ಲಿ ಸರ್ಜಾ ಫ್ಯಾಮಿಲಿ ಜೊತೆ ದರ್ಶನ್ ಕೂಡಾ ಜೊತೆಯಾಗಿದ್ದಾರೆ. ಹನುಮನ ಭಕ್ತರಾಗಿ ಹೆಜ್ಜೆ ಹಾಕಿದ್ದಾರೆ. ತಿಪ್ಪಸಂದ್ರ ಬಳಿಯ ಆಂಜನೇಯ ದೇಗುದಲ್ಲಿ ನಡೆದ ಚಿತ್ರೀಕರಣದಲ್ಲಿ ದರ್ಶನ್, ಅರ್ಜುನ್, ಧ್ರುವ ಹಾಗೂ ಚಿರಂಜೀವಿ ಸರ್ಜಾ ಒಟ್ಟಿಗೇ ಹೆಜ್ಜೆ ಹಾಕಿರುವುದು ವಿಶೇಷ.
ಅಂದಹಾಗೆ ದರ್ಶನ್, ಹೀಗೆ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸುವುದು ಹೊಸದೇನಲ್ಲ. ಅರಸು, ಮೊನಾಲಿಸಾ, ಚೌಕ, ನಾಗರಹಾವು.. ಹೀಗೆ ಹಲವು ಚಿತ್ರಗಳಲ್ಲಿ ಗೆಸ್ಟ್ ರೋಲ್‍ನಲ್ಲಿ ನಟಿಸಿದ್ದಾರೆ. ಪ್ರೇಮ ಬರಹದಲ್ಲಿ ಹೆಜ್ಜೆ ಹಾಕಿರುವುದು ಸರ್ಜಾ ಫ್ಯಾಮಿಲಿ ಮೇಲಿನ ಗೌರವಕ್ಕೆ.