` ಭೈರತಿ ರಣಗಲ್ಲು ಪಾತ್ರ ಸೃಷ್ಟಿಯಾಗಿದ್ದು ಹೇಗೆ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
story behinf byrathi ranagallu
Shivarajkumar In Mufti

ಭೈರತಿ ರಣಗಲ್ಲು. ಶಿವಣ್ಣ ತಮ್ಮ ಚಿತ್ರಜೀವನದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದು ಬಹುಶಃ ಇದೇ ಮೊದಲಿರಬೇಕು. ರೌಡಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರಾದರೂ, ಅವುಗಳಲ್ಲಿ ಶಿವರಾಜ್ ಕುಮಾರ್ ಹೀರೋ ಆಗಿದ್ದರು ಅನ್ನೋದು ವಿಶೇಷ. ಆದರೆ, ಮಫ್ತಿ ಹಾಗಲ್ಲ. ಶಿವರಾಜ್ ಕುಮಾರ್ ವಿಲನ್. ಆದರೆ, ಒಳ್ಳೆಯ ವಿಲನ್, ಅಷ್ಟೆ.

ಚಿತ್ರದ ಕಥೆ ಹಾಗೂ ಚಿತ್ರಕಥೆ ಬರೆಯುವಾಗ, ಭೈರತಿ ರಣಗಲ್ಲು ಪಾತ್ರಕ್ಕೆ ಕಣ್ಣುಗಳಲ್ಲೇ ಅಭಿನಯಿಸಬಲ್ಲ, ಕಣ್ಣಿನಲ್ಲೇ ಪವರ್ ಇರುವ ನಟ ಬೇಕು ಎನಿಸಿತು. ಆ ನಂತರ ನನ್ನ ಕಣ್ಣ ಮುಂದೆ ಬಂದಿದ್ದು ಶಿವರಾಜ್ ಕುಮಾರ್ ಮಾತ್ರ. ನನ್ನ ಅದೃಷ್ಟ, ಕಥೆ ಕೇಳಿದ ತಕ್ಷಣ ಒಪ್ಪಿಕೊಂಡುಬಿಟ್ಟರು ಎಂದು ಹೇಳಿಕೊಂಡಿದ್ದಾರೆ ನಿರ್ದೇಶಕ ನರ್ತನ್.

ವಿಲನ್ ಒಳ್ಳೆಯವನಾದರೆ, ಜನ ಬೇಗ ಒಪ್ಪಿಕೊಳ್ಳಲ್ಲ. ಆದರೆ ಹೀರೋ ವಿಲನ್ ಆಗಿ ನಟಿಸಿ, ನಂತರ ಒಳ್ಳೆಯವನಾಗಿ ಬದಲಾದರೆ, ಅದು ಜನರಿಗೆ ಇಷ್ಟವಾಗುತ್ತೆ. ಹೀಗಾಗಿಯೇ ಆ ಪಾತ್ರಕ್ಕೆ ಶಿವಣ್ಣ ಅವರನ್ನು ಆಯ್ಕೆ ಮಾಡಿಕೊಂಡೆವು ಎಂದಿದ್ದಾರೆ ನರ್ತನ್.