ಅರ್ಜುನ್ ರೆಡ್ಡಿ ಚಿತ್ರದ ಮೂಲಕ ತೆಲುಗಿನಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿರುವ ವಿಜಯ್ ದೇವರಕೊಂಡ ಅವರಿಗೆ ಕನ್ನಡ, ಕರ್ನಾಟಕ ಎಂದರೆ ತುಂಬಾ ಇಷ್ಟವಂತೆ. ಚಮಕ್ ಚಿತ್ರದ ಆಡಿಯೋ ಬಿಡುಗಡೆಗೆ ಬಂದಿದ್ದ ವಿಜಯ್ ದೇವರಕೊಂಡ, ತಮ್ಮ ಕನ್ನಡ, ಕರ್ನಾಟಕ ಅಭಿಮಾನದ ಬಗ್ಗೆ ಹೇಳಿಕೊಂಡಿದ್ದಾರೆ.
ಬೆಂಗಳೂರು ಎಂದರೆ ನೆನಪಾಗೋದು ಇಲ್ಲಿನ ಕ್ರಿಕೆಟರ್ಸ್. ಅದರಲ್ಲೂ ವೆಂಕಟೇಶ್ ಪ್ರಸಾದ್ ಎಂದರೆ ಬಹಳ ಇಷ್ಟ. ಸಿನಿಮಾ ವಿಚಾರಕ್ಕೆ ಬಂದರೆ, ಅವರು ಇತ್ತೀಚೆಗೆ ನೋಡಿದ ಕನ್ನಡ ಚಿತ್ರ ಮಫ್ತಿ.
ಮಫ್ತಿ ಸಿನಿಮಾ ನೋಡಿ ಹೊಟ್ಟೆಕಿಚ್ಚು ಶುರುವಾಯ್ತು. ಇಂಥಾ ಸಿನಿಮಾನ ನಾವು ಮಾಡಬೇಕು, ಇಲ್ಲವೆಂದರೆ ಇಂತಹ ಚಿತ್ರದಲ್ಲಿ ಪಾತ್ರವನ್ನಾದರೂ ಮಾಡಬೇಕು ಎಂಬ ಆಸೆಯಾಯಿತು. ಚಿತ್ರದ ಮೇಕಿಂಗ್ ಅಂತೂ ಅದ್ಭುತ ಎಂದು ಹೊಗಳಿದ್ದಾರೆ ವಿಜಯ್ ದೇವರಕೊಂಡ.
ಚಮಕ್ ಆಡಿಯೋ ರಿಲೀಸ್‍ನಲ್ಲಿ ಕಿರಿಕ್ ಪಾರ್ಟಿ ಚಿತ್ರದ ಬೆಳಗೆದ್ದು ಹಾಡಿನ ಪಲ್ಲವಿಯನ್ನೂ ಹಾಡಿದ ವಿಜಯ್, ಕಿರಿಕ್ ಪಾರ್ಟಿ ಸಿನಿಮಾವನ್ನೂ ನೋಡಿದ್ದಾರಂತೆ. ಆದರೆ, ಮಫ್ತಿ ಚಿತ್ರ ವಿಜಯ್‍ಗೆ ಥ್ರಿಲ್ ಮೂಡಿಸಿರುವುದು ನಿಜ.